ಲೈಫ್ ಸ್ಟೈಲ್

ಸುಕ್ಕು ನಿವಾರಕ ವಿಟಮಿನ್ ಫೇಷಿಯಲ್

Published

on

ಧ್ಯ ವಯಸ್ಸು ಸಮೀಪಿಸುವಂತೆಲ್ಲಾ ಮಹಿಳೆಯರಲ್ಲಿ ಅನೇಕ ಬದಲಾವಣೆ ತಲೆದೋರುತ್ತವೆ. ಮುಖ್ಯವಾಗಿ ಚರ್ಮದ ಮೇಲೆ ವಯಸ್ಸಿನ ಪ್ರಭಾವ ಅಧಿಕವಾಗಿರುತ್ತದೆ. ಮುಖದ ಮೇಲೆ, ಕಣ್ಣುಗಳ ಕೆಳಭಾಗದಲಲಿ ಸುಕ್ಕುಗಳು ಪ್ರಾರಂಭವಾಗಿ ಮಾನಸಿಕ ಹಿಂಸೆಯನ್ನು, ದೈಹಿಕ ವಿರೂಪವನ್ನು ಹುಟ್ಟಿ ಹಾಕುತ್ತದೆ.

ಒಣಚರ್ಮ ಇರುವವರಿಗೆ ಈ ಕೆಲವು ಸಮಸ್ಯೆಗಳು ಅಧಿಕವೇ! ಒಂದು ಸಾರಿ ಸುಕ್ಕು ಬಂತೆಂದರೆ ಅದನ್ನು ನಿವಾರಿಸುವುದು ಕಷ್ಟವೆಂತಲೇ ಹೇಳಬೇಕು. ಕೆಲವು ವಿಧಗಳ ಕ್ರೀಂಗಳ ಸರ್ಜರಿ ಮೂಲಕ ಇದಕ್ಕೆ ಶಾಶ್ವತ ಉಪಶಮನ ದೊರೆಯುತ್ತದೆ ಎನ್ನುತ್ತಾರೆ ನಿಪುಣ ಬ್ಯೂಟಿಷಿಯನ್ಸ್. ಆದರೆ 30 ವರ್ಷ ವಯಸ್ಸಿನಿಂದಲೇ ಕ್ರಮತಪ್ಪದಂತೆ ವಿಟಮಿನ್ ಫೇಷಿಯಲ್ ಮಾಡಿಸಿಕೊಂಡರೆ ಚರ್ಮದ ಸುಕ್ಕುಗಳನ್ನು ಬಹಳಷ್ಟು ಮಟ್ಟಿಗೆ ನಿವಾರಿಸುವುದು ಸಾಧ್ಯ.

ಸಾಮಾನ್ಯವಾಗಿ ನಾವು ವಿಟಮಿನ್‍ಗಳನ್ನು ಆರೋಗ್ಯಕ್ಕಾಗಿ ತೆಗೆದುಕೊಳ್ಳುತ್ತೇವೆ. ಚರ್ಮ ಸೌಂದರ್ಯಕ್ಕಾಗಿ ಇವುಗಳನ್ನು ಉಪಯೋಗಿಸಿದಾಗ ಉತ್ತಮ ಫಲಿತಾಂಶ ಕಂಡುಬರುತ್ತದೆ.
ಆಹಾರದಲ್ಲಿ ವಿಟಮಿನ್‍ಗಳು, ಖನಿಜಗಳು (ಐರನ್, ಜಿಂಕ್ ಇತ್ಯಾದಿ) ಇರುವಂತಹುದನ್ನು ಸೇವಿಸುವುದು, ನೀರನ್ನು ಹೆಚ್ಚಾಗಿ ಕುಡಿಯುವುದು, ಪೇಷಿಯಲ್ಸ್‍ಲ್ಲಿ ವಿಟಮಿನ್ಗಳನ್ನು ಮಸಾಜ್ ಮಾಡುವುದು ಕೆಲವು ಪದ್ಧತಿಗಳು. ವಿಟಮಿನ್‍ಗಳಲ್ಲಿ, ವಿಟಮಿನ್ ಎ,ಸಿ,ಇ ಈ ಮೂರನ್ನು ಉಪಯೋಗಿಸಿದರೆ ಒಣಚಮರ್,ಕ್ಕೆ ರಕ್ಷಣೆ ದೊರೆಯುವುದಲ್ಲದೆ, ಸುಕ್ಕು ಸಹ ನಿವಾರಣೆಯಾಗುತ್ತದೆ.

ವಿಟಮಿನ್ ಎ

ಚರ್ಮ ಸೌಂದರ್ಯಕ್ಕೆ ಅದರಲ್ಲೂ ಮುಖ್ಯವಾಘಿ ಒಣಚರ್ಮಕ್ಕೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ ವಿಟಮಿನ್ ಎ. ಕಾಡ್ಲಿವರ್ ಆಯಿಲ್ ,ಕ್ಯಾರೆಟ್, ಹಸಿರುಸೊಪ್ಪು, ಪುದೀನಾ ಸೊಪ್ಪು, ಹಾಲು ಮುಂತಾದವುಗಳಲ್ಲಿ ವಿಟಮಿನ್ ಎ ಹೇರಳವಾಗಿ ಲಭಿಸುತ್ತದೆ.ಇದು ಹೆಚ್ಚಾಗಲಿ, ಕಡಿಮೆಯಾಗಲಿ ಚರ್ಮವು ಒಣಗುವುದಷ್ಟೇ ಅಲ್ಲ, ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಮೊಟ್ಟಮೊದಲಗಿ ನಮ್ಮ ದೇಹದಲಿ ವಿಟಮಿನ್ ಎ ಕೊರತೆ ಇದೆಯಾ? ಎಂಬುದನ್ನು ದೃಢೀಕರಿಸಿಕೊಳ್ಳ ಬೇಕು. ಒಂದು ವೇಳೆ ಹೆಚ್ಚಾಗಿದ್ದರೆ ಡಾಕ್ಟರನ್ನು ಸಂಪರ್ಕಿಸಬೇಕು. ಕೊರತೆ ಇದ್ರೆ ನಮ್ಮ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಎ ಇರುವ ಆಹಾರವನ್ನು ಸೇವಿಸಬೇಕು. ಹಾಗೇ ಫೇಷಿಯಲ್ ಮಸಾಜ್‍ನಲ್ಲೂ ಬೆರೆಸುವುದು ಸೂಕ್ತ.

ವಿಟಮಿನ್ ಸಿ

ಜಿಡ್ಡು ಚರ್ಮವಿರುವವರಿಗೆ ವಿಟಮಿನ್ ಸಿ ಉಪಯೋಗಕ್ಕೆ ಬರುತ್ತದೆ. ಮೊಡವೆಗಳು, ಗಡ್ಡೆಗಳು ಇರುವವರಿಗೆ ಜಿಡ್ಡು ಇರದ ಕ್ರೀಂಗಳನ್ನು ಅದರ ಜೊತೆಗೆ ಸಿ ವಿಟಮಿನ್ ಬೆರೆಸಿ ಬಳಸಬೇಕು.
ನಲ್ಲಿಕಾಯಿ, ಆರೆಂಜ್, ನಿಂಬೆ, ಪೇರಲಹಣ್ಣೂ, ಚಕ್ಕೋತ, ಮೋಸಂಬಿ, ನೇರಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಇರುತ್ತದೆ. ನಮ್ಮ ನಿತ್ತ ಆಹಾರದಲ್ಲಿ ಇವುಗಳಲ್ಲಿ ಒಂದೆರಡನ್ನಧರೂ ಸೇವಿಸಿದರೆ ವಿಟಮಿನ್ ಸಿ ಕೊರತೆಯನ್ನು ನೀಗ ಬಹುದು. ಮುಖ ಹಾಗೂ ದೇಹದ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ.ಅಷ್ಟೇ ಅಲ್ಲ ವಿಟಮಿನ್ ಸ ನಿಂದ ಮುಖ ಮತ್ತು ದೇಹದ ಮಸಾಜ್ ಮಾಡಿದರೆ ಫಲಿತಾಂಶ ಇನ್ನೂ ಅದ್ಭುತವಾಗಿರುತ್ತದೆ.

ವಿಟಮಿನ್ ಇ

ದೇಹದಲ್ಲಿನ ಸುಕ್ಕುಗಳ ನಿವಾರಣೆಗೆ ಇ ವಿಟಮಿನ್ ಉತ್ತಮಸಹಕಾರ ನೀಡುತ್ತದೆ. ಇದರಲ್ಲಿ ನಿಯಾಸಿನ್ ಇರುವುದರಿಂದ ಇದು ಚರ್ಮವನ್ನು ಸುರಕ್ಷಿತ ಹಾಗೂ ಸುಂದರವಾಗಿರಿಸುತ್ತದೆ. ಹಣ್ಣುಗಳು (ಎಲ್ಲಾ ವಿಧವಾದ) ಸೊಪ್ಪುಗಳು, ತರಕಾರಿಗಳಲ್ಲಿ ವಿಟಮಿನ್ ಇ ಲಭ್ಯವಿದೆ. ಗೋಧಿ, ಅಕ್ಕಿ, ರಾಗಿ ಕಡ್ಲೆಕಾಯಿ, ಹಾಲು, ಮೊಸರು, ಮೊಟ್ಟೆ, ಹುರಳಿ, ಕಡ್ಲೆ, ಗೋಧಿ, ಮೊಳಕೆಗಳಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.

ವಿಟಮಿನ್ ಫೇಷಿಯಲ್

ಮುಖ ಹಾಗೂ ದೇಹದ ಚರ್ಮದ ಗುಣ, ಸ್ಥಿತಿಗತಿಗಳ ಆಧಾರದ ಮೇಲೆ ಫೇಷಿಯಲ್ ಮಸಾಜ್‍ನಲ್ಲಿ ವಿಟಮಿನ್ ಎ, ಸಿ, ಇ ಗಳನ್ನು ಉಪಯೋಗಿಸಬೇಕು. ಯಾವ ರೀತಿಯ ಚರ್ಮ ತತ್ವವಿರುವರಾದರೂ ದಿನಕ್ಕೆ ನಾಲ್ಕು ಲೀಟರ್ ನೀರನ್ನು ತಪ್ಪದೇ ಸೇವಿಸಬೇಕು. ಸುಂದರ ಚರ್ಮ ಕಾಂತಿಯನ್ನು ಪಡೆಯುವುದರಲ್ಲಿ ಇದು ಬಹಳ ಮುಖ್ಯವಾದದ್ದು. ಇದರಿಂದ ಒಣಚರ್ಮ ಒಂದರೆ ಹೋಗುತ್ತದೆ. ಮೊಡವೆಗಳೂ ನಿವಾರಣೆಯಾಗುತ್ತದೆ. ಸುಕ್ಕುಗಳ ನಿವಾರಣೆಯೂ ಸಾಧ್ಯ.

Leave a Reply

Your email address will not be published. Required fields are marked *

Trending

Exit mobile version