ದಿನದ ಸುದ್ದಿ

ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಶಾವೊಮಿ ಎಫ್-1: ಏನೆಲ್ಲಾ ಉಪಯೋಗಗಳಿವೆ ಗೊತ್ತಾ ?

Published

on

ಸುದ್ದಿದಿನ ಡೆಸ್ಕ್: ಮೊಬೈಲ್ ಫೋನ್ ‌ಕ್ಷೇತ್ರದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಶಾವೊಮಿ ಪೊಕೊಫೋನ್ ಎಫ್-1 ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಬೆಲೆ, ಫೀಚರ್, ಆಕರ್ಷಕ ಲುಕ್ ಕಾರಣಕ್ಕೆ ಈ ಹಿಂದೆ ಶಾವೊಮಿ ಪೊಕೊಫೋನ್ ಎಫ್-1 ಭಾರತದಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಈಗ ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾವೊಮಿ ಪೊಕೊಫೋನ್ ಎಫ್-1 ಹಲವು ಕಾರಣಗಳಿಂದ ಗ್ರಾಹಕರ ಚಿತ್ತ ಸೆಳೆಯುತ್ತಿದೆ.

ಶಾವೊಮಿ ಪೊಕೊಫೋನ್ ಎಫ್-1 ನಲ್ಲಿ ಏನೆಲ್ಲ ಇವೆ

  • 6.18 ಇಂಚಿನ ಎಚ್.ಡಿ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಫೋನ್ ಈ ಶಾವೊಮಿ ಪೊಕೊಫೋನ್ ಎಫ್-1.
  • ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸ್ಸರ್ ಆಧಾರಿತ ಈ ಫೋನ್ ನಲ್ಲಿ ಲಿಕ್ವಿಡ್ ಕೂಲ್ ತಂತ್ರಜ್ಞಾನ ಅಳವಡಿಸಿರುವುದು ವಿಶೇಷ
  • 4000 ಎಂಎಎಚ್ ಬ್ಯಾಟರಿ ಒಳಗೊಂಡಿದೆ. 6ಜಿಬಿ RAM, 12ಎಂಪಿ ಮತ್ತು 5ಎಂಪಿಯ ಎರಡು ರೇರ್, 20ಎಂಪಿ ಸೆಲ್ಫಿ ಕ್ಯಾಮರಾ ಇದೆ
  • ಈ ಫೋನ್ ಬೆಲೆ ರೂ.20,999 ಇರಲಿದ್ದು, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಹೊಂದಿದೆ.

Web Title: xiaomi pocophone f1 features kannada

Leave a Reply

Your email address will not be published. Required fields are marked *

Trending

Exit mobile version