ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಯೋಗ ದಿನಾಚರಣೆ
ಸುದ್ದಿದಿನ,ದಾವಣಗೆರೆ : ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎನ್.ಎಸ್.ಎಸ್, ಎನ್.ಸಿ.ಸಿ, ರೆಡ್ ಕ್ರಾಸ್, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಕ್ರೀಡಾ ವಿಭಾಗಗಳ ಸಹಯೋಗದೊಂದಿಗೆ ಯೋಗ ಮತ್ತು ಆಧ್ಯಾತ್ಮ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ದಾವಣಗೆರೆ ವಿವಿಯ ಅಧೀಕ್ಷಕರು ಹಾಗೂ ಯೋಗ ಶಿಕ್ಷಕರಾದ ನಂಜಪ್ಪನವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಸ್.ಆರ್ ಅಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು, ಸಹ ಪ್ರಾದ್ಯಾಪಕರಾದ ಡಾ.ಜ್ಯೋತಿ ಅವರು ಕಾರ್ಯಕ್ರಮ ನಿರೂಪಿಸಿದರು, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಗೌರಮ್ಮ ಸ್ವಾಗತಿಸಿದರು, ಸಮಾಜ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಲತಾ ವಂದಿಸಿದರು.
ಈ ವೇಳೆ ಡಾ.ಶಾಂತಕುಮಾರಿ, ಡಾ.ರುದ್ರಪ್ಪನವರು, ಪ್ರೊ. ಭೀಮಣ್ಣ ಸುಣಗಾರ, ಪ್ರೊ. ಗಿರೀಸ್ವಾಮಿ, ಡಾ. ಕರಬಸಪ್ಪ ನಂದಿಹಳ್ಳಿ, ಡಾ. ಜಕ್ಕವ್ವರ ಮಂಜುನಾಥ್, ಡಾ. ಲಕ್ಷಣ್, ಡಾ. ಟಿ. ಮಂಜಣ್ಣ, ಡಾ. ದಿನೇಶ್, ಡಾ. ತಿರುಮಲ, ಡಾ. ಮನೋಹರ್, ಡಾ. ಯೋಗೀಶ್, ಡಾ. ಶಶಿಕಲಾ, ಡಾ. ತ್ರಿವೇಣಿ, ಕಾಲೇಜಿನ ಎಲ್ಲಾ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕಳೆದ ಹಲವಾರು ದಿನಗಳಿಂದ ಯೋಗ ಹಾಗೂ ಪ್ರಾಣಯಾಮ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಗಳ ಜೊತೆಗೆ ಇತರ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆ ಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243