ರಾಜಕೀಯ
ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ
ಸುದ್ದಿದಿನ,ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜಕೀಯ ಬೆಳವಣಿಗೆಯಲ್ಲಿ ಹಲವು ಗೊಂದಲಗಳುಂಟಾಗಿದ್ದವು.ಆದರೆ ಈ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದೆ. ಕೊನೆಗೂ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನವನ್ನು ಇಂದು(ಮೇ17) ಸ್ವೀಕರಿಸಿದರು. ಪ್ರಮಾಣವಚನದ ಸಮಾರಂಭವು ರಾಜಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಸಿರು ಶಾಲು ಹೊದ್ದ ಯಡಿಯೂರಪ್ಪ ಅವರು, ದೇವರು, ರೈತರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ರಾಜ್ಯಪಾಲರಾಗಿರುವ ವಾಜುಬಾಯಿ ವಾಲ ಅವರು ಯಡಿಯೂರಪ್ಪ ನವರಿಗೆ ಗೌಪ್ಯತಾ ಪ್ರಮಾಣವನ್ನು ಬೋಧಿಸಿದರು. ಕಿಕ್ಕಿರಿದು ಸೇರಿದ್ದ ಜನಸಾಗರದ ನಡುವೆ ಜಯಘೋಷಗಳ ಕೂಗಾಟದಲ್ಲಿ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು.