ದಿನದ ಸುದ್ದಿ
ಯೋಗ ದೇಹ ಮತ್ತು ಮನಸ್ಸುಗಳ ಸಮ್ಮಿಲನ : ಪ್ರಾಂಶುಪಾಲ ಡಾ.ಅಮೃತೇಶ್ವರ ಬಿ.ಜಿ
ಸುದ್ದಿದಿನ,ಚನ್ನಗಿರಿ:ಯೋಗದ ಉಗಮ ಸ್ಥಾನ ಭಾರತ. ಇದು ದೇಹ ಮನಸ್ಸು ಮತ್ತು ಆತ್ಮಗಳ ಸಮ್ಮಿಲನವನ್ನು ಹಾಗೂ ಅನುಸಂಧಾನವನ್ನು ಮಾಡುತ್ತದೆ ಎಂದು ಪ್ರಾಂಶುಪಾಲ ಡಾ.ಅಮೃತೇಶ್ವರ ಬಿ.ಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಎನ್ ಎಸ್ ಎಸ್ ವತಿಯಿಂದ ಇಂದು ಅಂತರರಾಷ್ಟ್ರೀಯ ಯೋಗದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಅಂತರಾಷ್ಟ್ರೀಯ ಯೋಗ ದಿನ ಸರಿಸುಮಾರು ಹತ್ತು ವರ್ಷದಿಂದ ನಿರಂತರವಾಗಿ ಯೋಗ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಿಕೊಂಡು ಬಂದಿದ್ದೇವೆ ,ಸರಿ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಆಯುಷ್ ಯೋಗ ದಿನಾಚರಣೆ ವಿಶ್ವದ 142 ದೇಶಗಳು ಇಂದು ಆರೋಗ್ಯ ಸ್ವಾಸ್ಥಕ್ಕಾಗಿ ಯೋಗವನ್ನು ಆಚರಿಸುತ್ತಿವೆ ಎಂದರು.
ಯೋಗದಿಂದ ಮನುಕುಲಕ್ಕೆ ಹಲವಾರು ಪ್ರಯೋಜನಗಳಿವೆ ಭಾರತೀಯ ಋಷಿಮುನಿಗಳು ಸಂತರು ಯೋಗದ ಮಹತ್ವ ಹಾಗೂ ಪ್ರಯೋಜನಗಳನ್ನು ತಿಳಿಸಿದ್ದಾರೆ. ಇದನ್ನು ಇಡೀ ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ಭಾರತೀಯರದಾಗಿದೆ. ಬದಲಾದ ಜೀವನ ಶೈಲಿ ಒತ್ತಡದ ಹಾಗೂ ಧಾವಂತದ ಬದುಕು ದೈನಂದಿನ ಸಮಸ್ಯೆಗಳಿಂದ ಬಳಲುತ್ತಿರುವ ಇಂದಿನ ಬದುಕಿಗೆ ಯೋಗ ಪರಿಹಾರವನ್ನು ನೀಡುತ್ತದೆ ಯೋಗದಿಂದ ರೋಗ ಮುಕ್ತ ಎನ್ನುವ ಹೇಳಿಕೆ ಅರ್ಥಪೂರ್ಣವಾದದ್ದು ಹಲವು ಮಾರಣಾಂತಿಕ ರೋಗಗಳಿಗೆ ಹಾಗೂ ಸಮಸ್ಯೆಗಳಿಗೆ ಯೋಗ ರಾಮಬಾಣವಾಗಿದೆ ಸಕಾರಣವಾಗಿ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ತುರ್ತು ಹಿಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ಯೋಗೂತ್ಸವ ಕಾರ್ಯಕ್ರಮ ದ ಉದ್ದೇಶ ಮತ್ತು ಆಶಯಗಳು ನಾವುಗಳು ತಿಳಿಯಬೇಕಿದೆ ಈ ವರ್ಷದ ಘೋಷ ವಾಕ್ಯ ಏನೆಂದರೆ ಮಹಿಳಾ ಸಬಲೀಕರಣಕ್ಕಾಗಿ ಯೋಗ ಈ ಉದ್ದೇಶಿತ ಘೋಷ ವಾಕ್ಯದೊಂದಿಗೆ ಮಹಿಳಾ ಸಬಲೀಕರಣ ಮತ್ತು ಅದರ ಅವಶ್ಯಕತೆ ಕುರಿತಂತೆ ಚಚ್ಚಿಸುವ ಅನಿವಾರ್ಯತೆ ಇಂದಿನ ದಾಗಿದೆ ಎಂದರು.
ಮಹಿಳೆಯರು ಅದರಲ್ಲೂ ವಿಶೇಷವಾಗಿ ಗೃಹಿಣಿಯರು ದಿನದ 24 ಗಂಟೆಗಳಲ್ಲಿ 16 ಗಂಟೆಗಳು ಒತ್ತಡದ ಜೀವನದಲ್ಲಿ ಕೌಟುಂಬಿಕ ಗೃಹ ಕೃತ್ಯಗಳನ್ನು ನಡೆಸಿ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿ ಗಿಟ್ಟು ಕುಟುಂಬದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಅವರಿಗೆ ಈ ಯೋಗದ ಅವಶ್ಯಕತೆ ಇದೆ ಅವರು ಕೂಡ ಸಮಾಜವನ್ನು ಸದೃಢಗೊಳಿಸಲು ಸ್ವಾವಲಂಬನೆಯ ಬದುಕನ್ನ ಕಟ್ಟಿ ಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ತಮ್ಮ ವೈಯಕ್ತಿಕ ಸಮಸ್ಯೆಗಳಾದ ಪಿಸಿಓಡಿ ರಕ್ತ ಹೀನತೆ ಬಂಜೆತನ ಬೊಜ್ಜು ಒಬೆಸಿಟಿ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದರು ಕೌಟುಂಬಿಕ ಹಿತಕ್ಕಾಗಿ ನಿರಂತರ ಶ್ರಮ ವನ್ನು ಹಾಕುವುದರ ಮೂಲಕ ಕುಟುಂಬದ ಹಾಗೂ ಸಮಾಜದ ಹಿತಕ್ಕಾಗಿ ಮುಡಿಪಾಗಿದ್ದಾರೆ ಇಂತಹ ಸಂದರ್ಭದಲ್ಲಿ ಅವರು ಕೂಡ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯಾದರೂ ಯೋಗವನ್ನು ಮಾಡುವುದರ ಮೂಲಕ ಅವರು ಆರೋಗ್ಯವಂತರಾಗಿ ಸಮಾಜವನ್ನು ಆರೋಗ್ಯಯುತವಾಗಿ ಮಾಡುವ ಸಂಕಲ್ಪವನ್ನು ಮಾಡಬೇಕಿದೆ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿಯ ಸಂಯೋಜಕರಾದ ಪ್ರೊ.ವಿಜಯ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಕಲ್ಲೇಶಪ್ಪ, ಡಾ.ಪಾರ್ವತಿ, ಪ್ರೊ.ಶಕುಂತಲಾ, ಪ್ರೊ.ದಾಕ್ಷಾಯಿಣಿ ಡೋಗ್ರೆ, ಪ್ರೊ. ಸುಪ್ರಿಯಾ ಬುಟ್ಟೆ ಹಾಗೂ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ – ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243