ದಿನದ ಸುದ್ದಿ

ಸೌಹಾರ್ದತೆ ಮತ್ತು ಶಾಂತಿಗಾಗಿ ಯೋಗ

Published

on

ಸುದ್ದಿದಿನ ಡೆಸ್ಕ್ : ಇಂದು  ವಿಶ್ವದೆಲ್ಲೆಡೆ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ 6.30 ಕ್ಕೆ ದೆಹರಾಧೂನ್ ಅಲ್ಲಿ , 60000 ಜನರೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಾ .. ” ಯೋಗ ವಿಶ್ವದ ರಾಷ್ಟ್ರ ಗಳ ಸೌಹಾರ್ದತೆಯನ್ನು ಬೆಳೆಸಲು ಕೊಂಡಿ ಆಗಿದೆ” ಎಂದು ನುಡಿದರು.

ಉಪ ರಾಷ್ಟ್ರಪತಿ ವಂಕಯ್ಯ ನಾಯ್ಡು ಅವರು ಮುಂಬೈನ ಬಾಂದ್ರಾ ದಲ್ಲಿ ಯೋಗ ದಿನಾಚರಣೆ ಆಚರಿಸುತ್ತ,”ಯೋಗ ಮನುಷ್ಯ ನನ್ನ ಯೋಗ್ಯ ನಾಗಿಸುತ್ತದೆ “ಎಂದರು.

ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ “ಯೋಗ ದೇಹ ಮತ್ತು ಮನಸ್ಸಿನ ಕ್ರಯಾಶೀಲ ಚಟುವಟಿಕೆ ಗೆ ಅತ್ಯುತ್ತಮ ” ಎಂದಿದ್ದಾರೆ. ಯೋಗ ಕೇವಲ ಒಂದು ದಿನದ ಆಚರಣೆ ಆಗಿದೆ, ನಿಮ್ಮ ದಿನನಿತ್ಯ ದ ಚಟುವಟಿಕೆ ಆಗಲಿ ಎಂದು ವಿನಂತಿಸಿಕೊಂಡರು.

ಬಾಬಾ ರಾಮ್ ದೇವ್ ಅವರ ರಾಜಸ್ಥಾನದ ಮುಖ್ಯ ಮಂತ್ರಿ ವಸುಂಧರ ರಾಜೇ ಅವರ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸುತ್ತಾ “ಯೋಗದಿಂದ ಯುವಪೀಳಿಗೆಯ ಖಿನ್ನತೆ ಮತ್ತು ಉದ್ವೇಗ ಕಡಿಮೆಯಾಗುತ್ತದೆ ” ಎಂದು ಯೋಗಾಸನದ ಮಹತ್ವ ಸಾರಿದರು.

ಕೊರೆಯುವ ಚಳಿಯಲ್ಲಿ ಸೇನಾ ಸಿಬ್ಬಂದಿಗಳು ಲಡಾಕ್ ನ 18000 ಅಡಿ ಎತ್ತರದ ಹಿಮ ಪರ್ವತ ದಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ.

ಭಾರತದ ನೌಕಾಪಡೆ ಕೊಚ್ಚಿಯ INS ಜಮುನಾ ನೌಕೆಯಲ್ಲಿ  ಯೋಗಾಸನ ಮಾಡುವುದರೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ.ಭಾರತದ ವಾಯುಪಡೆ ಯ ಸಿಬ್ಬಂದಿ  ಆಕಾಶದಿಂದ 15000 ಅಡಿ ಮೇಲೆ ಹೋಗಿ ಗಾಳಿಯಲ್ಲಿ ಯೋಗಾಸನ ಮಾಡಿದರು.

ಇಂಡೋ-ಟಿಬೆಟ್ ಬಾರ್ಡರ್ ನ ಸೈನಿಕರು..ಅಡಿಗರು ದನಿಯಲ್ಲಿ ಮುಳುಗಿ… “ನದಿ ಯೋಗ” ಮಾಡುವುದರೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version