ದಿನದ ಸುದ್ದಿ

ಚನ್ನಗಿರಿ | ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೋಗ ದಿನಾಚರಣೆ

Published

on

ಸುದ್ದಿದಿನ, ಚನ್ನಗಿರಿ : ಮಂಗಳವಾರ ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ದೈಹಿಕ ಶಿಕ್ಷಣ ವಿಭಾಗ,ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ರಾಷ್ಟ್ರೀಯ ಸೇವಾಘಟಕ 1 ಮತ್ತು 2, ಮಹಿಳಾ ಸಬಲೀಕರಣ ಹಾಗೂ ಪತಂಜಲಿ ಯೋಗ ಕೇಂದ್ರ, ಅಜ್ಜಂಪುರ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅಥಿತಿಗಳಾಗಿ ಐಕ್ಯೂಎಸಿ ಸಂಚಾಲಕರಾದ ಪ್ರೊ.ಅಬ್ದುಲ್ ರೆಹಮಾನ್ ಇದ್ದರು. ಹಾಗೂ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಉಪನ್ಯಾಕಿಯಾದ ಸ್ವರೂಪ ಅವರು ‘ ಮಾನವೀಯತೆಗಾಗಿ ಯೋಗ’ ಎಂಬ ವಿಷಯದ ಕುರಿತು ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಪತಂಜಲಿ ಯೋಗ ಕೇಂದ್ರದ ಶೀಲ ವ್ಯಾಪಾರೋದ್ಯಮ, ದೀಪ ವ್ಯಾಪಾರೋದ್ಯಮ ಹಾಗೂ ಯೋಗ ಸಾಧಕ ಕೇಶವ್ ಅವರು ಯೋಗದ ವಿವಿಧ ಆಸನಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಹೇಳಿಕೊಟ್ಟರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹಾಲಸಿದ್ದಪ್ಪ ಮತ್ತು ಮುಖ್ಯ ಅಥಿತಿಗಳು ಮಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಮಂಜುಳ ಎಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಪ್ರದೀಪ್ ಕುಮಾರ್ ಜಿ.ಎಂ, ಅವರು ಸ್ವಾಗತಿಸಿದರು. ಡಾ.ಸುನೀತಾ ವಂದಿಸಿದರು. ಪ್ರೊ.ಗೌರಮ್ಮ ಡಿ.ಎಂ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಂದನ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪ್ರೊ.ಮೊಹಮ್ಮದ್ ಖಾನ್, ಡಾ.ಅಮೃತೇಶ್ವರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಕಲ್ಲಪ್ಪ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version