ದಿನದ ಸುದ್ದಿ

ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಳೆ ಅಂತರಾಷ್ಟ್ರೀಯ ಯೋಗ ದಿನಾಚರಣೆ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜೂನ್.21 ರ ಮಂಗಳವಾರ ದಂದು ಬೆಳಿಗ್ಗೆ 7.30 ಕ್ಕೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಯೋಗ ಮತ್ತು ಆಧ್ಯಾತ್ಮ ವೇದಿಕೆ, ಎನ್.ಎನ್.ಎಸ್, ಎನ್.ಸಿ.ಸಿ, ಸೌಟ್ & ಗೈಡ್, ರೆಡ್ ಕ್ರಾಸ್ ಮತ್ತು ಕ್ರೀಡಾ ವಿಭಾಗ ವತಿಯಿಂದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ’ವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು ಡಾ. ಅಂಜನಪ್ಪ ಎಸ್.ಆರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕರು, ದಾವಣಗೆರೆ ವಿಶ್ವವಿದ್ಯಾನಿಲಯದ ಅಧೀಕ್ಷಕರಾದ ನಂಜಪ್ಪ ಕೆ.ಎಂ, ಯೋಗ ಪ್ರೇರಕರು ಮತ್ತು ದಾನಿಗಳಾದ ಟಿ.ಎಂ. ವನಜಾಕ್ಷಿ ಶಿವಲಿಂಗಪ್ಪ ಅವರು ಭಾಗವಹಿಸುವರು. ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ ಟಿ, ಐ.ಕ್ಯೂ.ಎ.ಸಿ. ಹಾಗೂ ಸೌಟ್ & ಗೈಡ್ ಸಂಚಾಲಕರಾದ ಡಾ. ನಾರಯಣಸ್ವಾಮಿ ಕೆ, ಯೋಗ ಮತ್ತು ಆಧ್ಯಾತ್ಮಿಕ ವೇದಿಕೆಯ ಸಂಚಾಲಕರಾದ ಡಾ. ಶಾಂತಕುಮಾರಿ ಕೆ.ಹೆಚ್.ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಎನ್.ಎಸ್.ಎಸ್. ಸಂಚಾಲಕರಾದ ಪ್ರೊ ಗಿರಿಸ್ವಾಮಿ, ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ. ಗುರುದೇವ್ ಎಸ್.ಎಂ, ಡಾ. ಶಿವಕುಮಾರ್ ಕೆ, ಎನ್.ಸಿ.ಸಿ. ಅಧಿಕಾರಿ ಡಾ. ಸದಾಶಿವಪ್ಪ ಜಿ.ಸಿ, ರೆಡ್ ಕ್ರಾಸ್ ಸಂಚಾಲಕರಾದ ಪ್ರೊ. ನಟರಾಜ್ ಜಿ.ಆರ್. ಯೋಗ ತರಬೇತಿದಾರರಾದ ಪ್ರೊ.ರುದ್ರಪ್ಪ ಕೆ.ಎಂ, ಯೋಗ ಮತ್ತು ಆಧ್ಯಾತ್ಮ ವೇದಿಕೆ ಸದಸ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋದಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಳ್ಳುವರು ಎಂದು ಪ್ರೊ. ಭೀಮಣ್ಣ ಸುಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version