ದಿನದ ಸುದ್ದಿ

ಮದರಸಾಗಳಲ್ಲಿ ‘ಡ್ರೆಸ್ ಕೋಡ್’ ಬದಲಿಸಲು ಯೋಗಿ ಸರ್ಕಾರ ಚಿಂತನೆ

Published

on

ಸುದ್ದಿದಿನ ಡೆಸ್ಕ್ : ಯೋಗಿ ಆದಿತ್ಯನಾಥ ಸರ್ಕಾರ ಇದೀಗ ಹೊಸ ಯೋಜನೆಗೆ ಮುಂದಾಗಿದ್ದು, ಉತ್ತರ ಪ್ರದೇಶ ರಾಜ್ಯದ ಮದರಸಗಳಲ್ಲಿ ಆಧುನಿಕರಣದ ಹೆಸರಲ್ಲಿ ಡ್ರೆಸ್ ಕೋಡ್ ಬದಲಿಸಲು ಚಿಂತನೆ ನಡೆಸಿದೆ.

ಉತ್ತರ ಪ್ರದೇಶದ ಬಹುತೇಕ ಎಲ್ಲಾ ಮದರಸಗಳಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕುರ್ತಾ- ಪೈಜಾಮ ಧರಿಸಿಕೊಳ್ಳುತ್ತಿದ್ದಾರೆ. ಈ ಸಾಂಪ್ರದಾಯಿಕ ಉಡುಗೆ ಪರಂಪರೆಗೆ ಇತಿಶ್ರೀ ಹಾಡಲು ಯೋಗಿ ಸರ್ಕಾರ ಚಿಂತನೆ ನಡೆಸಿದ್ದು, ಕುರ್ತಾ- ಪೈಜಾಮದಿಂದ ಟೀ ಶರ್ಟ್- ಪ್ಯಾಂಟ್ ದಿರಿಸು ಬದಲಿಸಲು ಮುಂದಾಗಿದೆ.

ಈಗಾಗಲೇ ಮದರಸಗಳಲ್ಲಿ ಎನ್ಸಿಇಆರ್ಟಿ (NCERT) ಪಠ್ಯಕ್ರಮ ಪರಿಚಯಿಸಲು ಸಿದ್ಧತೆ ನಡೆಸಿದೆ. ಮದರಸಗಳ ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಧರ್ಮಶಾಸ್ತ್ರ ಮತ್ತು ಧಾರ್ಮಿಕ ಕಾನೂನು ಜತೆಗೆ ಸೋಷಿಯಲ್‌ ಸೈನ್ಸ್‌, ಮ್ಯಾಥ್ಸ್, ಸೈನ್ಸ್ ವಿಷಯಗಳ ಪಠ್ಯಕ್ರಮ ಬೋಧನೆಗೆ ಚಿಂತನೆ ನಡೆಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version