ದಿನದ ಸುದ್ದಿ

ಬುಕ್ ಮಾಡಿದ್ದು ಚಿನ್ನದ ನಾಣ್ಯ, ಬಂದದ್ದು ಖಾಲಿ ಬಾಕ್ಸ್

ಫ್ಲಿಪ್ ಕಾರ್ಟ್ ಆನ್‍ಲೈನ್ ಖರೀದಿ ತಾಣದಲ್ಲಿ ಚಿನ್ನದ ನಾಣ್ಯಗಳನ್ನು ಬುಕ್ ಮಾಡಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊದರ ಉದ್ಯೋಗಿಗೆ ಖಾಲಿ ಬಾಕ್ಸ್ ತಲುಪಿದ್ದು, ಈ ಸಂಬಂಧ ಎಚ್‍ಎಎಲ್ ಪೊಲೀಸರು ಫ್ಲಿಪ್ ಕಾರ್ಟ್ ಹಾಗೂ ಪಿವಿಸಿ ಲಾಜಿಸ್ಟಿಕ್ಸ್ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ.

Published

on

ಸುದ್ದಿದಿನ ಡೆಸ್ಕ್: ಫ್ಲಿಪ್ ಕಾರ್ಟ್ ಆನ್‍ಲೈನ್ ಖರೀದಿ ತಾಣದಲ್ಲಿ ಚಿನ್ನದ ನಾಣ್ಯಗಳನ್ನು ಬುಕ್ ಮಾಡಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊದರ ಉದ್ಯೋಗಿಗೆ ಖಾಲಿ ಬಾಕ್ಸ್ ತಲುಪಿದ್ದು, ಈ ಸಂಬಂಧ ಎಚ್‍ಎಎಲ್ ಪೊಲೀಸರು ಫ್ಲಿಪ್ ಕಾರ್ಟ್ ಹಾಗೂ ಪಿವಿಸಿ ಲಾಜಿಸ್ಟಿಕ್ಸ್ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ಅಮಿತ್ ಕುಮಾರ್ ಗರ್ಗ್ ಅವರು 20 ಗ್ರಾಂ ಚಿನ್ನದ ನಾಣ್ಯಗಳನ್ನು ಬುಕ್ ಮಾಡಿ ಆನ್‍ಲೈನ್‍ನಲ್ಲಿ 61,755 ರೂ. ಸಲ್ಲಿಸಿದ್ದರು. ಫ್ಲಿಪ್ ಕಾರ್ಟ್‍ನ ಡೆಲಿವರಿ ಬಾಯ್ ಬಂದಾಗ ಅವರ ಮುಂದೆಯೇ ಪಾರ್ಸೆಲ್ ತೆರೆದಾಗ ಅದರಲ್ಲಿ ಏನೂ ಇಲ್ಲದಿರುವುದು ಗಮನಕ್ಕೆ ಬಂತು. ಇದನ್ನು ವಿಚಾರಿಸಿದಾಗ ಸಂಸ್ಥೆಯವರನ್ನೇ ಕೇಳಬೇಕು ಎಂದು ಡೆಲಿವರಿ ಬಾಯ್ ಉತ್ತರಿಸಿದ್ದ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಸಾಕ್ಷಿಯಾಗಿ ಸಲ್ಲಿಸಿ ಅಮಿತ್ ಅವರು ದೂರು ದಾಖಲಿಸಿದ್ದರು, ಈ ಸಂಬಂಧ ಪೊಲೀಸರು ಎರಡೂ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version