ದಿನದ ಸುದ್ದಿ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿಸಿದ ಅಬಕಾರಿ ಸುಂಕವನ್ನು ರದ್ದುಗೊಳಿಸಿ : ಯುವ ಕಾಂಗ್ರೆಸ್ ಅಗ್ರಹ

Published

on

ಸುದ್ದಿದಿನ,ಬಳ್ಳಾರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೇಕಾಬಿಟ್ಟಿಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಾ ಬರುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಸಾಮಾನ್ಯವಾಗಿ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ತುಂಬಾ ಹೈರಾಣ ಆಗುತ್ತಿದ್ದಾರೆ.

ಕೂಡಲೇ ಕೇಂದ್ರ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ರದ್ದುಪಡಿಸಬೇಕೆಂದು ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಜ್ಯ ಅಧ್ಯಕ್ಷರಾದ ಎಸ್.ಹೆಚ್.ಮಂಜುನಾಥ್ ಗೌಡ ಇವರ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ ಅವರ ಮಾರ್ಗದಲ್ಲಿ ಬಳ್ಳಾರಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಕೆ.ಶ್ರೀಕಾಂತ್ ಇವರ ನೇತತ್ವದಲ್ಲಿ ಮೋಕಾ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಎಸ್.ಜೆ.ಕೋಟೆ ಉಮೇಶ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಗ್ರಾಮಾಂತರ ಅಸೆಂಬ್ಲಿ ಅಧ್ಯಕ್ಷರಾದ ಫಾರೋಜ್ ಖಾನ್ ಹಾಗೂ ಬ್ಲಾಕ್ ಅಧ್ಯಕ್ಷರಾದ ಫಜೀಲ್, ಅಬ್ದುಲ್ ಬಾರಿ ಮತ್ತು ಪಧಾದಿಕಾರಿಗಳ ಸಮ್ಮುಖದಲ್ಲಿ ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಮನವಿ ಪತ್ರವನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪೆಟ್ರೋಲ್ ರೂ.2 ಹೆಚ್ಚಿಸುವ ಮತ್ತು ಎಲ್.ಜಿ.ಪಿ.ಸಿಲಿಂಡರ್ ಬೆಲೆಯನ್ನು ರೂ.50 ಹೆಚ್ಚಿಸುವ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವನ್ನು ಭಾರತೀಯ ಯುವ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ಈ ಬೆಲೆ ಏರಿಕೆಗಳು ಈಗಾಗಳೇ ಹಣದುಬ್ಬರ ಮತ್ತು ನಿರೋದ್ಯಗದಿಂದ ಬಳಲುತ್ತಿರುವ ಸಾಮಾನ್ಯ ರೈತರು ದಿನಗೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟಂಬಗಳ ಮೇಲೆ ಭಾರಿ ಹೊರೆಯಾಗಿದೆ, ಆದ್ದರಿಂದ ಈ ಕೂಡಲೇ ಕೇಂದ್ರ ಬಿ.ಜೆ.ಪಿ ಸರ್ಕಾರವು ಏರಿಕೆ ಮಾಡಿರುವ ಎಲ್.ಪಿ.ಜಿ. ಮತ್ತು ಅನಿಲ ದರವನ್ನು ಪರಿಷ್ಕರಿಸಿ ತಕ್ಷಣದಿಂದ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ವತಿಯಿಂದ ಆಗ್ರಹಿಸುತ್ತಿದ್ದೇವೆ ಎಂದರು.

ಈ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ನಾಯಕರಾದ ಸಿದ್ದುಹಳ್ಳೆಗೌಡ, ಬಳ್ಳಾರಿ ಜಿಲ್ಲಾ ನಗರ ಯುವ ಅಧ್ಯಕ್ಷರಾದ ಶ್ರೀಕಾಂತ್, ಬಳ್ಳಾರಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಎನ್.ಕೆ.ಎಸ್.ಮಂಜುನಾಥ್, ಮೋಕಾ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಎಸ್.ಜೆ.ಕೋಟೆ ಉಮೇಶ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಗ್ರಾಮಾಂತರ ಅಸೆಂಬ್ಲಿ ಅಧ್ಯಕ್ಷರಾದ ಫಾರೋಜ್ ಖಾನ್ ಹಾಗೂ ಬ್ಲಾಕ್ ಅಧ್ಯಕ್ಷರಾದ ಫಜೀಲ್, ಅಬ್ದುಲ್ ಬಾರಿ, ಡಿಸಿಸಿ ಕಾರ್ಯದರ್ಶಿ ವಿ.ಸುನೀತ, ನಾಮ ನಿರ್ದೇಶಕ ಪಾಲಿಕೆಯ ಸದಸ್ಯರಾದ ಸಮೀರ್, ಯುವ ಅಧ್ಯಕ್ಷರಾದ ಕವಿತ, ಸಂಡೂರು ಅಸೆಂಬ್ಲಿ ಅಧ್ಯಕ್ಷರಾದ ಬಸವರಾಜ್, ಸಿರುಗುಪ್ಪ ಅಸೆಂಬ್ಲಿ ಅಧ್ಯಕ್ಷರಾದ ಟಿ.ಗೋವಿಂದ, ಪ್ರಧಾನ ಕಾರ್ಯದರ್ಶಿ ಅಜಾರುದ್ದೀನ್, ಮಂಜುನಾಥ್ ಸಿ.ಎನ್. ಕುರುಗೋಡು ಬ್ಲಾಕ್ ಯುವ ಅಧ್ಯಕ್ಷರಾದ ರಾಘವೇಂದ್ರ, ಕಾಂಗ್ರೆಸ್ ಯುವ ಮುಖಂಡರಾದ ಅಸುಂಡಿ ಹನುಮೇಶ್, ಸಿಂಧವಾಳ ಅರುಣ್ ಕುಮಾರ್, ಲಕ್ಷ್ಮಿ ರೆಡ್ಡಿ, ಚಳ್ಳಗುರ್ಕಿ ತಿಪ್ಪೇಶ್, ಅಂಜೀನೆಯ, ರೇಡಿಯೋ ಪಾರ್ಕ್ ಮಮತ, ನಾಗಲಕೆರೆ ಗೀತಾ, ದಿವಾಕರ್ ಸೇರಿದಂತೆ ಕಾಂಗ್ರೆಸ್ ಯುವ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version