ದಿನದ ಸುದ್ದಿ

ಸಂಸತ್ ಬಳಿ ಮಂಗಗಳನ್ನು ಓಡಿಸಲು ಕೋತಿ ವೇಷದ ಯುವಕರು

Published

on

ಲಂಗೂರ್ ವೇಷದಲ್ಲಿ ಯುವಕ
  • ಸುದ್ದಿದಿನ ಡೆಸ್ಕ್: ರಾಜಧಾನಿ ದಿಲ್ಲಿಯ ಸಂಸತ್ ಭವನದ ಬಳಿ ಮಂಗಗಳ ಹಾವಳಿ ಇಂದು ನಿನ್ನೆಯದಲ್ಲ.

ಏನೇ ಮಾಡಿದರೂ ಅಲ್ಲಿಂದ ಜಾಗ ಖಾಲಿ ಮಾಡದ ಈ ಮಂಗಗಳು ರಾಜಕಾರಣಿಗಳನ್ನೂ ಹೆದರಿಸಿದ ಉದಾಹರಣೆ ಇವೆ.

ಈ ಖಿಲಾಡಿ ಮಂಗಗಳನ್ನು ಹೆಸರಿಸಲು ದಿಲ್ಲಿ ಮುನ್ಸಿಪಾಲಿಟಿ ಅಧಿಕಾರಿಗಳು ಲಂಗೂರ್ ವೇಷದಲ್ಲಿರುವ ಯುವಕರ ತಂಡವನ್ನು ನೇಮಿಸಿದೆ. ಈ ತಂಡವು ಮಂಗಳನ್ನು ಹೆದರಿಸಿ ಓಡಿಸುತ್ತಿದೆ.

ಸಂಸತ್ ಭವನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇದನ್ನು ಸದಸ್ಯರ ಗಮನಕ್ಕೆ ತಂದರು.

ಲಂಗೂರ್ ನಂತೆ ಓಡಾಡುತ್ತಿರುವ ಯುವಕರು ಕೋತಿಗಳನ್ನು ಬೆದರಿಸಿ ಓಡಿಸುತ್ತಿದ್ದಾರೆ. ಮಂಗಗಳ ಹತ್ತಿರ ಹೋಗಿ ಪ್ಲಾಸ್ಟಿಕ್ ಬುಲೆಟ್ ಪ್ರಯೋಗಿಸುತ್ತದ್ದಾರೆ ಎಂದೂ ತಿಳಿಸಿದರು

Leave a Reply

Your email address will not be published. Required fields are marked *

Trending

Exit mobile version