ಕ್ರೀಡೆ

ಶಿವಮೊಗ್ಗ : ಚೀನಾದಲ್ಲಿ ನಡೆಯುವ ‘ಯೂತ್ ಎಕ್ಸ್ ಚೇಂಜ್ ಪ್ರೋಗ್ರಾಂ-2019’ ಗೆ ಕುಮಾರಿ ಶ್ವೇತಾ ಆಯ್ಕೆ

Published

on

ಸುದ್ದಿದಿನ,ಶಿವಮೊಗ್ಗ : ಅರಣ್ಯ ಮಹಾವಿದ್ಯಾಲಯ, ಪೊನ್ನೊಂಪೇಟೆಯ ವಿದ್ಯಾರ್ಥಿನಿ ಕುಮಾರಿ ಶ್ವೇತಾ. ಎಸ್, ದ್ವಿತೀಯ ಬಿ.ಎಸ್ಸಿ (ಅರಣ್ಯ), ಚೀನಾದಲ್ಲಿ 2019 ಜೂನ್ 30 ರಿಂದ ಜುಲೈ 10 ರ ವರೆಗೆ ನಡೆಯುವ “Youth Exchange programme-2019” ನಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸೇವಾಯೋಜನಾ ಘಟಕದಿಂದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಭಾರತವನ್ನು ವಿದೇಶದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.ಕಾರ್ಯಕ್ರಮವು ಚೀನಾದ ಪ್ರಮುಖ ನಗರಗಳಾದ Beijing, Lanzhdu & Dunhuangಗಳಲ್ಲಿ 11 ದಿನಗಳ ಕಾಲ ನಡೆಯಲಿದೆ.

ಇವರ ಈ ಯಶಸ್ಸಿಗೆ ಕಾರಣರಾದ ಅರಣ್ಯ ಮಹಾವಿದ್ಯಾಲಯದ ಡೀನ್‍ರವರಿಗೂ ಹಾಗೂ ರಾಷ್ಟ್ರೀಯ ಸೇವಾಯೋಜನಾ ಘಟಕದ ಸಂಯೋಜನಾ ಅಧಿಕಾರಿಯಾದ ಸುಬ್ರಮಣಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತೆರ ಸಿಬ್ಬಂದಿ ವರ್ಗದವರಿಗೂ ವಿಶ್ವವಿದ್ಯಾಲಯಲಯದ ವತಿಯಿಂದ ಅಭಿನಂದನೆಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version