ದಿನದ ಸುದ್ದಿ
ರಸ್ತೆ ಹೊಂಡದಲ್ಲಿ ಪಂಚಾಯ್ತಿ ಸದಸ್ಯರನ್ನು ಹೂಳ್ತಾರಂತೆ
ತಮ್ಮೂರಿನಲ್ಲಿದ್ದ ರಸ್ತೆ ಹೊಂಡಗಳನ್ನು ಕಡೆಗಣಿಸಿದ ಗ್ರಾಮ ಪಂಚಾಯಿತಿ ಸದಸ್ಯರನ್ನು ಟೀಕಿಸುವ ಸಲುವಾಗಿ ಕೊಡಗಿನ ಊರೊಂದರಲ್ಲಿ ಯುವಕರು ಹಾಕಿರುವ ಬ್ಯಾನರ್ ಗಮನ ಸೆಳೆಯುತ್ತಿದೆ.
ಸುದ್ದಿದಿನ ಡೆಸ್ಕ್: ಬೆಂಗಳೂರಿನ ರಸ್ತೆಯಲ್ಲಿರುವ ಹೊಂಡ ಹೊಸತೇನಲ್ಲ. ರಾಜಧಾನಿಯ ಪರಿಸ್ಥಿತಿಯೇ ಹೀಗಾದರೆ ಇನ್ನು ಗ್ರಾಮಾಂತರ ಪ್ರದೇಶಗಳ ಸ್ಥಿತಿ ನೀವು ಊಹಿಸಬಹುದು.
ತಮ್ಮೂರಿನಲ್ಲಿದ್ದ ರಸ್ತೆ ಹೊಂಡಗಳನ್ನು ಕಡೆಗಣಿಸಿದ ಗ್ರಾಮ ಪಂಚಾಯಿತಿ ಸದಸ್ಯರನ್ನು ಟೀಕಿಸುವ ಸಲುವಾಗಿ ಕೊಡಗಿನ ಊರೊಂದರಲ್ಲಿ ಯುವಕರು ಹಾಕಿರುವ ಬ್ಯಾನರ್ ಗಮನ ಸೆಳೆಯುತ್ತಿದೆ. ಜತೆಗೆ ಜನಪ್ರತಿನಿಧಿಗಳಿಗೆ ಮುಟ್ಟಿನೋಡಿಕೊಳ್ಳುವಂಥ ಟೀಕೆ ನೀಡಿದೆ.
ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಾಆಪ್ ನಲ್ಲಿ ಹರಿದಾಡುತ್ತಿದೆ.
ಆ ಬ್ಯಾನರ್ ಹೀಗಿದೆ
ಸೂಚನೆ- ಇಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೂತುಹಾಕಲು ರಸ್ತೆಯಲ್ಲಿ ಹೊಂಡ ತೆಗೆಯಲಾಗಿದೆ. ಜಾಗ್ರತೆಯಿಂದ ವಾಹನ ಚಾಲನೆ ಮಾಡಿ.
ವಿ.ಸೂ- ರಸ್ತೆ ಸರಿಯಾಗದೆ ಭಿತ್ತಿ ಪತ್ರ ತೆಗೆದವರು ನಾಯಿಗಳಿಗೆ ಸಮ.