ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಮಟ್ಟದ ಯುವಜನ ಮೇಳದ ಆಯ್ಕೆ ಸ್ಪರ್ಧೆಗಳು
ಸುದ್ದಿದಿನ,ದಾವಣಗೆರೆ : 2019-20ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳದ ಆಯ್ಕೆ ಸ್ಪರ್ಧೆಗಳನ್ನು ಫೆ.06 ಮತ್ತು 07 ರಂದು ಸರ್ಕಾರಿ ನೌಕರರ ಭವನ, ನಿಜಲಿಂಗಪ್ಪ ಬಡಾವಣೆ, ದಾವಣಗೆರೆ ಇಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಯುವಜನ ಮೇಳದ ಆಯ್ಕೆ ಸ್ಪರ್ಧೆಗಳಲ್ಲಿ ಜಿಲ್ಲೆಯ 15 ವರ್ಷ ಮೇಲ್ಪಟ್ಟ ಹಾಊ 35 ವರ್ಷದೊಳಗಿನ ಸಂಘ ಸಂಸ್ಥೆಗಳ ಯುವಕ/ಯುವತಿಯರು ಹಾಗೂ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು. ವಿಜೇತ ಸ್ಪರ್ಧಾಳುಗಳಿಗೆ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಗಳ ವಿವರ
ಭಾವಗೀತೆ, ಗೀಗಿ ಪದ, ಲಾವಣಿ, ಕೋಲಾಟ, ವೀರಗಾಸೆ/ಪುರವಂತಿಕೆ/ವೀರಭದ್ರ ಕುಣಿತ, ಡೊಳ್ಳುಕುಣಿತ, ರಂಗಗೀತೆ, ಜಾನಪದ ನೃತ್ಯ, ರಾಗಿ/ಜೋಳ ಬೀಸುವ ಒನಕೆ ಪದ, ಸೋಬಾನೆ ಪದ, ಭಜನೆ, ಜಾನಪದ ಗೀತೆ, ದೊಡ್ಡಾಟ(ಮೂಡಲಪಾಯ), ಸಣ್ಣಾಟ, ಯಕ್ಷಗಾನ, ಚರ್ಮವಾಧ್ಯ ಮೇಳ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಯುವಕ/ಯುವತಿಯರ ವಿಭಾಗದಲ್ಲಿ ಏರ್ಪಡಿಸಲಾಗಿರುತ್ತದೆ.
ಭಾಗವಹಿಸುವ ಸ್ಪರ್ಧಾಳುಗಳು ವೈಯಕ್ತಿಕ/ಸಂಘದ ಬ್ಯಾಂಕ್ ಪಾಸ್‍ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು. ಸ್ಪರ್ಧಾಳುಗಳು ಫೆ.06 ರಂದು ಬೆಳಿಗ್ಗೆ 9.30ಕ್ಕೆ ಸರ್ಕಾರಿ ನೌಕರರ ಭವನ, ನಿಜಲಿಂಗಪ್ಪ ಬಡಾವಣೆ ದಾವಣಗೆರೆ ಇಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-237480ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243