ದಿನದ ಸುದ್ದಿ
ಇಂದಿಗೆ 11 ವರ್ಷವಾಯ್ತು ಒಂದು ಓವರಿಗೆ ಯುವರಾಜ್ ಸಿಂಗ್ ಆರು ಸಿಕ್ಸ್ ಬಾರಿಸಿದ್ದು
ಸುದ್ದಿದಿನ ಡೆಸ್ಕ್: ಆಲ್ ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತದ ಭರವಸೆಯ ಆಟಗಾರ. ಯುವರಾಜ್ ಸಿಂಗ್ ಬ್ಯಾಟಿಂಗ್ ಅಬ್ಬರಕ್ಕೆ ಅದೆಷ್ಟೋ ಬೌಲರ್‌ಗಳು ತತ್ತಸಿದ ಹೋಗಿದ್ದಾರೆ. ಇದರಿಂದ ಯುವರಾಜ್ ಸಿಂಗ್ ಅದೆಷ್ಟೋ ದಾಖಲೆಗಳನ್ನು ವಿಶ್ವ ಕ್ರಿಕೆಟ್ ನಲ್ಲಿ ನಿರ್ಮಿಸಿದ್ದಾರೆ. ಇಂದಿಗೂ ಅವರ ದಾಖಲೆ ಮುರಿಯುವ ಪ್ರಯತ್ನ ಯಾರಿಂದಲೂ ಸಾಧ್ಯವಾಗಿಲ್ಲ. ಇದಕ್ಕೆ ಸಾಕ್ಷಿ 2007ರ ಸೆಪ್ಟೆಂಬರ್ 19ರಂದು ಒಂದೇ ಆರು ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದರು.
ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿರುವ ಕಿಂಗ್ಸ್ಮೀಡ್ ಕ್ರಿಕೆಟ್ ಮೈದಾನದಲ್ಲಿ 2007ರಲ್ಲಿ ಐಸಿಸಿ ಟಿ20 ವಿಶ್ವ ಕಪ್ ಪಂದ್ಯದ 19ನೇ ಓವರಿನಲ್ಲಿ ಬೌಲಿಂಗ್ ಮಾಡಲು ಸ್ಟುವರ್ಟ್ ಬ್ರಾಡ್ ಆರು ಎಸೆತಕ್ಕೂ ಯುವರಾಜ್ ಸಿಂಗ್ ಮೈದಾನ ಸುತ್ತಲೂ ಸಿಕ್ಸರ್ ಬಾರಿಸಿ ಬ್ರಾಡ್ ನ ಬೆವರಿಸಿದರು. ಟಿ20 ವಿಶ್ವ ಕಪ್ ಆರು ಬಾಲಿಗೂ ಸಿಕ್ಸರ್ ಬಾರಿಸಿದ ಮೊದಲಿಗರಾದರು. ಈಗ ಇಂದಿಗೆ ಅಂದರೆ ಸೆಪ್ಟೆಂಬರ್ 19ಕ್ಕೆ ಹನ್ನೊಂದು ವರ್ಷವಾಗಿದೆ.