ದಿನದ ಸುದ್ದಿ
ಕಳೆದ 8 ವರ್ಷಗಳಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇಕಡ 50ರಷ್ಟು ಏರಿಕೆ : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಸುದ್ದಿದಿನ ಡೆಸ್ಕ್ : ಕಳೆದ 8 ವರ್ಷಗಳಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇಕಡ 50ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ, ಕೌಶಾಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಒಡಿಶಾದ ಅಂಗುಲ್ ನಲ್ಲಿಂದು ಕಾರ್ಮಿಕರ ರಾಜ್ಯ ವಿಮಾ ನಿಗಮ- ಇ ಎಸ್ ಐ ಸಿ ಆಸ್ಪತ್ರೆ ಉದ್ಘಾಟನೆ ಮಾಡಿ ಭಾಷಣ ಮಾಡಿದ ಸಚಿವರು, ಕಾರ್ಮಿಕರ ಯೋಗಕ್ಷೇಮ ಕುರಿತು ಕೇಂದ್ರ ಹೆಚ್ಚಿನ ನಿಗಾವಹಿಸಿದೆ ಎಂದರು. ಕಾರ್ಮಿಕರು ಕ್ಷೇಮವಾಗಿದ್ದರೆ ಉತ್ಪಾದನೆ ಹೆಚ್ಚಾಗಿ ಆ ಮೂಲಕ ದೇಶದ ಆರ್ಥಿಕತೆ ಬಲಗೊಳ್ಳಲಿದೆ.
ಆ ಮೂಲಕ ಬಡವರ ಜೀವನ ಉತ್ತಮಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರೋಗ್ಯ ರಕ್ಷಣೆ ಮತ್ತು ವಿಮೆ ಸೌಲಭ್ಯಗಳ ಮೂಲಕ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆ ಒದಗಿಸಲು ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಇ-ಶ್ರಮ್ ಪೋರ್ಟಲ್‌ನಲ್ಲಿ ಎಲ್ಲ ಕಾರ್ಮಿಕರು ನೋಂದಣಿಯಾಗುವುದನ್ನು ಸಂಬಂಧಪಟ್ಟ ಎಲ್ಲ ಭಾಗಿದಾರರು ಖಾತ್ರಿಪಡಿಸಬೇಕು. ಇದರಿಂದ ಸರ್ಕಾರದ ಸೌಲಭ್ಯಗಳು ಕಾರ್ಮಿಕರಿಗೆ ಸುಲಭವಾಗಿ ದೊರೆಯಲಿದೆ ಎಂದು ಅವರು ಸಲಹೆ ನೀಡಿದರು.
ମୋଦି ସରକାରଙ୍କ ସେବା ଓ କଲ୍ୟାଣ ମନ୍ତ୍ରରେ ଆଜି ବଳରାମପ୍ରସାଦରେ 100 ଶଯ୍ୟା ବିଶିଷ୍ଟ ଇଏସଆଇ ଡ଼ାକ୍ତରଖାନା ଏବଂ ଝାରସଗୁଡ଼ାରେ ଇଆସଆଇର ଉପ-ଆଞ୍ଚଳିକ କାର୍ଯ୍ୟାଳୟର ଲୋକାର୍ପଣ କରାଯାଇଛି । ଏହି ଡ଼ାକ୍ତରଖାନା ଓ ଉପ-ଆଞ୍ଚଳିକ କାର୍ଯ୍ୟାଳୟ ଦ୍ୱାରା ହଜାର ହଜାର ଶ୍ରମିକ ଓ କର୍ମଚାରୀ ଉପକୃତ ହେବେ ।#8YearsOfSeva pic.twitter.com/woSIxu011r
— Dharmendra Pradhan (@dpradhanbjp) June 15, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243