ದಿನದ ಸುದ್ದಿ

ದಾವಣಗೆರೆಯಲ್ಲಿ ಮೇ 27ಮತ್ತು 28ರಂದು ‘8ನೇ ಮೇ ಸಾಹಿತ್ಯ ಮೇಳ’ : ಬಸವರಾಜ್ ಸೂಳಿಬಾವಿ

Published

on

ಸುದ್ದಿದಿನ,ದಾವಣಗೆರೆ : ನಗರದ ಬೂದಾಳು ರಸ್ತೆಯಲ್ಲಿರುವ ತಾಜ್ ಪ್ಯಾಲೆಸ್ ನಲ್ಲಿ ಮೇ 27ಮತ್ತು 28ರಂದು ‘8ನೇ ಮೇ ಸಾಹಿತ್ಯ ಮೇಳ’ ಆಯೋಜಿಸಲಾಗಿದೆ ಎಂದು ಗದಗಿನ ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ್ ಸೂಳಿಬಾವಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿಂದು ಅವರು ಮಾತನಾಡಿದರು.
ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಭ್ರಾತೃತ್ವ ಭಾವನೆ ಮೂಡಿಸಿದ ಸಂವಿಧಾನ ರೂಪಿತಗೊಂಡು 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳ ಕುರಿತು 2ದಿನವೂ ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ ಎಂದರು.

ಮೇ 27ರ ಬೆಳಿಗ್ಗೆ 10ಕ್ಕೆ ಸಾಹಿತ್ಯ ಸಮ್ಮೇಳನವು ಉದ್ಘಾಟನೆಗೊಳ್ಳಲಿದ್ದು ಮುತ್ತು ಬಿಳಿಮಲೆ ಪ್ರಸ್ತಾವನೆಯನ್ನು ಮಾತನಾಡಲಿದ್ದು, ಶ್ರಮಿಕರು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಚೆನ್ನೈನ ಜಸ್ಟಿಸ್ ಕೆ ಚಂದ್ರು,ಬಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಸಂವಿಧಾನದ ಓದುವರು.

ಪಿ.ಸಾಯಿನಾಥ್, ದೆಹಲಿಯ ಕವಿತಾ ಕೃಷ್ಣನ್, ಮಂಗಳೂರಿನ ಅಬ್ದುಸ್ಸಲಾಂ ಪುತ್ತಿಗೆ, ಎಂ.ಜಿ. ಈಶ್ವರಪ್ಪ, ಐವನ್ ಡಿಸಿಲ್ವಾ, ಡಿ.ಬಿ.ರಜಿಯಾ, ಅಶೋಕ ಬರಗುಂಡಿ, ಎಲ್. ಹೆಚ್.ಅರಣ್ ಕುಮಾರ್ ಎಚ್. ಎಸ್. ಅನುಪಮಾ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 2ರಿಂದ ನಡೆಯುವ ಅಭಿವ್ಯಕ್ತಿ ಗೋಷ್ಠಿಯಲ್ಲಿ ಬಂಜಗೆರೆ ಜಯಪ್ರಕಾಶ್, ಚೇತನ ಅಹಿಂಸಾ, ಗಂಗಾಧರ ಪತ್ತಾರ, ಹೆಗ್ಗೆರೆ ರಂಗಪ್ಪ, ಎಚ್.ವಿಶ್ವನಾಥ್, ಶೇಖಣ್ಣ ಕವಳಿಕಾಯಿ, ಸಿಕಂದರ ಅಲಿ, ಎಂ.ಗುರುಸಿದ್ಧಸ್ವಾಮಿ ಪಾಲ್ಗೊಳ್ಳುವರು. ಮಧ್ಯಾಹ್ನ 3.150 ಗ್ರಾಮಭಾರತ ಗೋಷ್ಠಿಯಲ್ಲಿ ಕೆ.ಪಿ.ಸುರೇಶ್, ಪ್ರಕಾಶ್ ಕಮ್ಮರಡಿ, ತೇಜಸ್ವಿ ಪಟೇಲ್, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ನಳಿನ ಗೌಡ ಪಾಲ್ಗೊಳ್ಳುವರು.

ನಡೆಯಲಿದ್ದು, 4.3000 ಕಾವ್ಯ ಪ್ರಸ್ತುತಿ, ಸಂಜೆ 6ಕ್ಕೆ ತರುಣ ಭಾರತ ಕುರಿತು ಗೋಷ್ಠಿ ನಡೆಯಲಿದೆ. ರಾತ್ರಿ 7.45ಕ್ಕೆ ರಂಗ ಪ್ರಸ್ತುತಿ, 8.15ಕ್ಕೆ ಕಿಸಾನ್ ಸತ್ಯಾಗ್ರಹ, ರಾತ್ರಿ 10ರಿಂದ ‘ಹೊನಲು ಬೆಳಕಿನ ಕವಿಗೋಷ್ಟಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

28ಕ್ಕೆ ಬೆಳಿಗ್ಗೆ 8.30ಕ್ಕೆ ಕವಿಗೋಷ್ಟಿ, 10.30ಕ್ಕೆ ಬಹುತ್ವ ಭಾರತ, ಮಧ್ಯಾಹ್ನ 12.30ಕ್ಕೆ ಮಹಿಳಾ ಭಾರತ, 3ಕ್ಕೆ ಅನುಭವ ಕಥನ ಕುರಿತು ಗೋಷ್ಠಿಗಳು ನಡೆಯಲಿವೆ.

ನಂತರ ಸಂಜೆ 5ಕ್ಕೆ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ ನಡೆಯಲಿದ್ದು, ಬಸವರಾಜ್ ಹೂಗಾರ ಪ್ರಾಸ್ತಾವಿಕ ಭಾಷಣ ಮಾಡುವರು. ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪ ಭಾಷಣ ಮಾಡುವರು.

ಸುನಂದಾ ಕಡಮೆ,ಬಿ.ಪೀರ್ ಭಾಷಾ, ಮಹಾಂತೇಶ್ ನವಲಕಲ್, ಅನೀಸ್ ಪಾಷಾ, ಅವರಗೆರೆ ಹೆಚ್.ಜಿ.ಉಮೇಶ್, ಜಬೀನಾ ಖಾನಂ, ಇ.ಬಸವರಾಜ್, ಡಿ.ಬಿ.ಗವಾನಿ, ಕೃಷ್ಣ ನಾಯಕ ಹಿಚ್ಚಡ, ಸಿ.ಗಂಗಾಧರ, ಕಲ್ಪಿತಾ ರಾಣಿ ಅಗಮಿಸುವರು ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಅನೀಸ್ ಪಾಷಾ, ಎಲ್.ಹೆಚ್.ಅರುಣ್ ಕುಮಾರ್, ಹೆಚ್.ಜಿ.ಉಮೇಶ್, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಗುಂಡಗತ್ತಿ ರಾಜಶೇಖರ, ಬುರುಡೇಕಟ್ಟೆ ಮಂಜಪ್ಪ, ಜಬೀನಾ ಖಾನಂ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version