ದಿನದ ಸುದ್ದಿ
ರಾಜ ರಾಜೇಶ್ವರಿ ಶಾಲೆಗೆ ಎ ಗ್ರೇಡ್ ; ಅಭಿನಂದನಾ ಪತ್ರ ಹಸ್ತಾಂತರ
ಸುದ್ದಿದಿನ ಡೆಸ್ಕ್ : 2021 – 22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವ ಮಲೇಬೆನ್ನೂರು ಜಿಗಳಿ ರಸ್ತೆಯ ಒಡೆಯರ್ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಲಾದ ಎ – ಗ್ರೇಡ್ ಅಭಿನಂದನಾ ಪತ್ರವನ್ನು ಗುರುವಾರ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಧರ ಎಸ್ ಅವರು ಸಂಸ್ಥೆಯ ಕಾರ್ಯದರ್ಶಿ ಜಿ.ಬಿ ಶಿವಾನಂದಪ್ಪ ಅವರಿಗೆ ಹಸ್ತಾಂತರಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಮಾತನಾಡಿ, ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಶಿಕ್ಷಕರ ಶ್ರಮ ಹಾಗೂ ಆಡಳಿತ ಮಂಡಳಿಯ ಸಹಕಾರವನ್ನು ಸ್ಮರಿಸುವ ಜೊತೆ ತಮ್ಮ ಶಾಲೆಗೆ ಸಿಕ್ಕಿರುವ ಶ್ರೇಣಿಯನ್ನು ಕಾಪಾಡಿಕೊಂಡು ಹೋಗೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ರವೀಂದ್ರ, ಆಸೀಫುಲ್ಲಾ, ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಪ್ರತಿಭಾ, ನಗೀನಾ, ಶಾಂತಾ, ಭಾಗ್ಯ, ಅನುಷಾ, ಚಂದನ, ಶೋಭಾ, ಭಾನುಮತಿ ಸೇರಿದಂತೆ ಇತರರು, ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243