ದಿನದ ಸುದ್ದಿ
ಮಾಲೀಕನ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ
ಸುದ್ದಿದಿನ,ಮಂಡ್ಯ : ಮದ್ದೂರು ಪಟ್ಟಣದ ಶಿವಪುರದ ನೈದಿಲೆ ರೆಸಿಡೆನ್ಸಿಯಲ್ಲಿ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನೈದಿಲೆ ರೆಸಿಡೆನ್ಸಿಯ ಮಾಲೀಕರ ವಿರುದ್ಧ ಮನು (40) ಎಂಬಾತ “ನನ್ನ ಸಾವಿಗೆ ನಮ್ಮ ಯಜಮಾನ ಕಾರಣ” ಎಂದು ಡೆತ್ ನೋಟ್ ನಲ್ಲಿ ಬರೆದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.
ಲಾಡ್ಜ್ ಅನ್ನು ಬಾಡಿಗೆ ಪಡೆದು ನಡೆಸುತ್ತಿದ್ದ ಮನು. ಲಾಡ್ಜ್ ನಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿರು ಈ ವ್ಯಕ್ತಿ ಲಾಡ್ಜ್ ಅಲ್ಲಿ ಬರಬೇಕಾದ ಹಣವನ್ನು ತಾಯಿಗೆ ಬರಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳಕ್ಕೆ ಮದ್ದೂರು ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401