ದಿನದ ಸುದ್ದಿ
ಕೊಡಗು ಸಂತ್ರಸ್ತರಿಗೆ ಮೂರು ತಿಂಗಳ ಪಿಂಚಣಿ ಹಣ ನೀಡಿದ ನಿವೃತ್ತ ನೌಕರ..!
ಸುದ್ದಿದಿನ ಡೆಸ್ಕ್ | ಕೊಡಗಿನ ಜನರ ಸ್ಥಿತಿ ನೆನೆದು ಗಳಗಳನೆ ಅತ್ತುಬಿಟ್ಟ ಅರಣ್ಯ ಇಲಾಖೆ ನಿವೃತ್ತ ನೌಕರ. ತಮಗೆ ಬರುವ ಮೂರು ತಿಂಗಳ ಪಿಂಚಣಿ 50 ಸಾವಿರ ರೂ ಹಣವನ್ನ ಸಿಎಂ ಫಂಡ್ ಗೆ ನೀಡಿದ ವೆಂಕಟರಾಮಯ್ಯ. ಬದುಕಿನಲ್ಲಿ ಒಂದೇ ಬಾರಿ ಮಡಿಕೇರಿಗೆ ಹೋಗಿದ್ದ ವೆಂಕಟರಾಮಯ್ಯ ಅವರು ಕೊಡಗಿನವರ ಕಷ್ಟಕ್ಕೆ ನೆರವಾಗಿದ್ದಾರೆ.
ಕೋಲಾರದ ಅಜ್ಜಪ್ಪನ ಹಳ್ಳಿ ನಿವಾಸಿ ಆಗಿರುವ ಇವರು, ಜನರ ಸಂಕಷ್ಟ ನೋಡಲಾರದೆ ನೆರವು ನೀಡುತ್ತಿದ್ದೇನೆ ಎನ್ನುತ್ತಲೇ ಕಣ್ಣೀರು ಸುರಿಸಿದರು. ಮಗ ಮಂಜುನಾಥ್ ಅಟ್ಲಾಂಟಿಕಾದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಅವರೂ ಸಹ ಧನಸಹಾಯ ಮಾಡಲಿದ್ದಾರೆ ಎಂದ ವೆಂಕಟರಾಮಯ್ಯ.ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಗೆ ಚೆಕ್ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401