ದಿನದ ಸುದ್ದಿ
ಹೊನ್ನಾಳಿ | ಮದ್ಯ ಸೇವನೆಗೆ ಹಣ ಕೊಡದಿದ್ದಕ್ಕೆ ತಂದೆಯನ್ನೇ ಕೊಂದ ಮಗ
ಸುದ್ದಿದಿನ,ದಾವಣಗೆರೆ: ಮದ್ಯ ಸೇವೆನೆಗೆ ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿ ಮಂಜಪ್ಪ(65) ಮಗನಿಂದ ಕೊಲೆಯಾದ ತಂದೆ. ಮಗ ನರಸಿಂಹಪ್ಪ ಕಳೆದ ರಾತ್ರಿ ಮದ್ಯ ಕುಡಿಯಲು ಹಣಬೇಕು ಎಂದು ತಂದೆ ಮಂಜಪ್ಪನನ್ನು ಪೀಡಿಸಿದ್ದು. ಇದಕ್ಕೆ ತಂದೆ ಮಂಜಪ್ಪ, ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ತಂದೆ ನರಸಿಂಹಪ್ಪನನ್ನು ಮಗ ಮಂಜಪ್ಪ
ಎಳೆದಾಡಿ ಕೆಳಗೆ ಬೀಳಿಸಿ ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರ ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಮಂಜಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ತಾಯಿ ದೂರು ನೀಡಿದ್ದು, ಕೂಡಲೇ ಸಿಪಿಐ ದೇವರಾಜ್ ನೇತೃತ್ವದ ತಂಡವು ಆರೋಪಿ ನರಸಿಂಹಪ್ಪನನ್ನು ಬಂಧಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243