ರಾಜಕೀಯ

‘ಅಬ್ದುಲ್ ಕಲಾಂ’ ಹೆಸರಿಡಿ ಹಜ್ ಭವನಕ್ಕೆ : ಯಡಿಯೂರಪ್ಪ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ‌ ಸರ್ಕಾರ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದಾಗಿ ಪ್ರಸ್ತಾಪಿಸಿದ್ದೇ ಬಿಜೆಪಿ ಅದನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ ಬಿಜೆಪಿಯು ಈಗ ಹಜ್ ಭವನಕ್ಕೆ ಹೆಸರು ಬದಲಾಯಿಸುವುದಾದರೆ ಮಾಜಿ ರಾಷ್ಟ್ರಪತಿ ದಿವಂಗತ ‘ಅಬ್ದುಲ್ ಕಲಾಂ’ ಹೆಸರಿಡಿ ಎಂದು ಸರಕಾರಕ್ಕೆ ಸೂಚಿಸಿದ್ದಾರೆ.

ಈ ವಿಷಯದ ಕುರಿತಾಗಿ ನಗರದಲ್ಲಿ‌ ಮಾಧ್ಯಮಗಳ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ, ” ಹಜ್ ಭವನಕ್ಕೆ ನಾನೊಂದು ಹೆಸರು ಸೂಚಿಸಿತ್ತೇನೆ, ಅದು ಅಬ್ದುಲ್ ಕಲಾಂ, ಇವರ ಹೆಸರನ್ನ ಹಜ್ ಭವನಕ್ಕಿಡಲಿ, ಟಿಪ್ಪು ಹೆಸರು ಬೇಡ”ಎಂದು ಸಲಹೆ ನೀಡಿದ್ದರು.

ಕೆಲವು ದಿನಗಳ‌ ಹಿಂದೆಯಷ್ಟೇ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಹಜ್,ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ” ಹಜ್ ಭವನದ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಭವನ್ ಎಂದು ಬದಲಾಯಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆಗೆ ಬಿಜೆಪಿಯು ಉಗ್ರವಾಗಿ ವಿರೋಧಿಸಿತ್ತು. ಹಾಗೆಯೇ ಹಜ್ ಭವನಕ್ಕೆ ಟಿಪ್ಪುವಿನ ಹೆಸರಿಟ್ಟರೆ ಹೋರಾಟ ನಡೆಸುವುದಾಗಿ ತಿಳಿಸಿತ್ತು. ಆದರೆ ಈಗ ಬಿಜೆಪಿ ಪಕ್ಷವೇ ಅಬ್ದುಲ್ ಕಲಾಂ‌ಹೆಸರನ್ನು ಸೂಚಿಸಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version