ಸಿನಿ ಸುದ್ದಿ
‘ಟಗರು ಪುಟ್ಟಿ ಮಾನ್ವಿತಾ’ ಮದುವೆ ಆಗೋ ಹುಡುಗ ಹೆಚ್ಚು ಪುಸ್ತಕ ಓದಿರ್ಬೇಕಂತೆ..!
ಸುದ್ದಿದಿನ ಡೆಸ್ಕ್ : ದುನಿಯಾ ಸೂರಿ ನಿರ್ದೇಶನದ ‘ಕೆಂಡ ಸಂಪಿಗೆ’ ಸಿನೆಮಾ ಮೂಲಕ ಎಲ್ಲರ ಮನಗೆದ್ದ ನಟಿ ಮಾನ್ವಿತಾ ಹರೀಶ್. 125ದಿನ ಪೂರೈಸಿರುವ ಟಗರು ಸಿನೆಮಾದಲ್ಲೂ ತನ್ನ ಅದ್ಭುತ ನಟನೆಯಿಂದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರಿಂದ ಸಿನೆಮಾಕ್ಕೆ ಆಯ್ಕೆಯಾಗಿ ಟೋಕನ್ ಅಡ್ವಾನ್ಸ್ ಕೂಡಾ ಗಿಟ್ಟಿಸಿಕೊಂಡಿದ್ದಾರೆ ಮಾನ್ವಿತ.
ಪಕ್ಕಾ ಚಾಕೊಲೇಟ್ ಗರ್ಲ್ ಹಾಗಿರೋ ಮಾನ್ವಿತ ತನ್ನನ್ನು ಮದುವೆ ಆಗೋ ಹುಡುಗ ಹೇಗಿರಬೇಕು ಎಂಬುದನ್ನ ಮಾಧ್ಯಮವೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
” ನಾನು ಮದುವೆ ಆಗೋ ಹುಡುಗ ತುಂಬಾ ಪುಸ್ತಕ ಓದಿರ ಬೇಕು, ಯಾಕಂದ್ರೆ ಅವ್ರಿಂದ ಹೆಚ್ಚಿ ವಿಷಯಗಳನ್ನ ತಿಳ್ಕೊ ಬಹುದು, ಹಾಗೆ ಸಂಗೀತ ಕಲಿತಿರ ಬೇಕು, ಹಾಡೋಕೆ ಬರೋದಿಲ್ಲಾ ಅಂದ್ರೂ ಓಕೆ, ಹಾಡುಗಳನ್ನ ಬರೆಯೋಕಾದ್ರು ಬರ್ಬೇಕು.” ಎಂದು ತನ್ನ ಪ್ಯೂಚರ್ ಪತಿಯ ಬಗ್ಗೆ ಟಗರು ಪುಟ್ಟಿ ಮಾನ್ವಿತಾ ಹೇಳಿದ್ದಾರೆ.