ದಿನದ ಸುದ್ದಿ

ಎಣ್ಣೆ ಹೊಡೆಲಿಲ್ದೋರು ಬೇಗ ಸಾಯ್ತಾರಂತೆ…!

Published

on

ಸುದ್ದಿದಿನ ಡೆಸ್ಕ್ : ಣ್ಣೆ ಹೊಡೆಯೋರಿಗೆ ಈ ಸುದ್ದಿ ಖುಷಿತಂದಿರ್ಬಹುದು. ಹಾಗೇನೇ ಎಣ್ಣೆ ದ್ವೇಷಿಗಳಿಗೆ ಈ ಸುದ್ದಿ ಇನ್ನಷ್ಟು ಕೋಪ ಬರ್ಸಿರ್ಬಹುದು. ಆದ್ರೆ ಎಣ್ಣೆ ಹೊಡಿಯೋರು, ಹೊಡೀದೆ ಇರೋರು ಈ ಸುದ್ದಿನ ಓದ್ಲೇ ಬೇಕು. ಅಂದಹಾಗೆ ನ್ಯೂಜಿಲೆಂಡ್ ನ ‘ಕ್ವೀನ್ ಯೂನಿವರ್ಸಿಟಿ’ಯ ಸಂಶೋಧಕರು ಮಂಡಿಸಿರೋ ಈ ವರಿದಿಯಂತೂ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿರೋದಂತೂ ಸತ್ಯ.

ವಾರಕ್ಕೆ ಎರಡು ಬಾಟೆಲ್ ಬಿಯರ್ ಅಥವಾ ಒಂದು ಗ್ಲಾಸ್ ವೈನ್ ಕುಡಿಯುವವರ ಆರೋಗ್ಯ ಉತ್ತಮವಾಗಿರುತ್ತೆ, ಆಲ್ಕೋಹಾಲ್ ಸೇವಿಸುವವರಿಗಿಂತ ಸೇವಿಸದೇ ಇರುವವರು ಬೇಗ ಸಾವನ್ನಪ್ಪುತ್ತಾರೆ ಅಂತ ನ್ಯೂಜಿಲೆಂಡ್ ನ ಕ್ವೀನ್ಸ್ ಯೂನಿವರ್ಸಿಟಿಯ ಸಂಶೋಧಕರು ಪ್ರಕಟಿಸಿರುವ ವರದಿ ಹೇಳುತ್ತದೆ.

ಕ್ವೀನ್ಸ್ ಯೂನಿವರ್ಸಿಟಿಯ ಸಂಶೋಧಕ ಡಾ. ಆಂಡ್ರೋ ಕುಂಜಮನ್ ಎಂಬುವವರು ಸುಮಾರು 55ವರ್ಷಕ್ಕೆ ಮೇಲ್ಪಟ್ಟು ನಿಧನರಾದ ಅಮೆರಿಕಾದ ವ್ಯಕ್ತಿಗಳ ಬಗೆಗೆ ಸಂಶೋಧನೆ ನಡೆಸಿದಾಗ ಅವರಿಗೆ ಈ ವಿಷಯ ತಿಳಿದು ಬಂದಿದೆ.ಹಾಗೇ ಆಲ್ಕೋಹಾಲ್ ಸೇವಿಸದವರು ಬೇಗನೇ ಸಾವನ್ನಪ್ಪುವುದು ಹಾಗೂ ಆಲ್ಕೋಹಾಲನ್ನು ಸೇವಿಸದವರಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಂಡುಬಂದಿದೆಯಂತೆ ಇವರ ಸಂಶೋಧನೆಯಲ್ಲಿ.

ಆದ್ರೆ ಈ ವಿಷಯದ ಕುರಿತಾಗಿ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ಹೇಳಿರುವ ಡಾ.ಆಂಡ್ರೋ ಕುಂಜಮನ್, ಪ್ರತಿನಿತ್ಯ ಆಲ್ಕೋಹಾಲ್ ಸೇವನೆಯನ್ನು ಉತ್ತೇಜಿಸುವುದಿಲ್ಲ ಹಾಗೆ ದಿನವೂ ಆಲ್ಕೋಹಾಲ್ ಸೇವಿಸುವುದರಿಂದ ಆಗುವ ದುಷ್ಪರಿಣಾಮದ ಬಗೆಗೆ ಸಂಶೋಧನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version