ದಿನದ ಸುದ್ದಿ
ರಾಜ್ಯ ಅಲೆಮಾರಿ ಬುಡಕಟ್ಟು ಸಮಿತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆಗಳ ಮನವಿ ಸಲ್ಲಿಕೆ
ಸುದ್ದಿದಿನ, ಬೆಂಗಳೂರು : ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಲೆಮಾರಿ ನಿಗಮವನ್ನು ಮತ್ತು ಸಂಶೋಧನಾ ಕೇಂದ್ರ ಅಲೆಮಾರಿ ಆಯೋಗ ನಿರ್ಮಿಸಬೇಕು ಎಂದು ಶುಕ್ರವಾರ ಸಚಿವ ಗೋವಿಂದ ಕಾರಜೋಳ ಅವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಬಜೆಟ್ ಪೂರ್ವ ಸಭೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಅಲೆಮಾರಿ ಬುಡಕಟ್ಟು ರಾಜ್ಯ ಸಮಿತಿಯು ಮನವಿಮಾಡಿತು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ 2020-21 ನೇ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಗೆ ಅಲೆಮಾರಿ ಬುಡಕಟ್ಟು ಮಹಾ ಸಭಾದ ವತಿಯಿಂದ ಭಾಗವಹಿಸಲಾಗಿತ್ತು. ಅಲೆಮಾರಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಕೆಳಕಂಡ ಸಲಹೆ ಹಾಗೂ ಬೇಡಿಕೆ ನೀಡಲಾಗಿದೆ.
- ಸದರಿ ಸಭೆಯಲ್ಲಿ SC/ST ಅಲೆಮಾರಿ ಸಮುದಾಯಗಳ ಪರವಾಗಿ SC/ST ಅಲೆಮಾರಿ ನಿಗಮವನ್ನು ಸ್ಥಾಪನೆ ಮಾಡಿ ಪತ್ರೇಕ ನಿರ್ದೇಶನಾಲಯ ರಚಿಸಿ 100 ಕೋಟಿ ಅನುದಾನ ಮೀಸಲಿಡಬೇಕು.
- ಅಲೆಮಾರಿಗಳ ಆಚರಣೆ ಕಲೆ ಸಂಸ್ಕೃತಿಯ ಉಳಿಸಿಕೊಳ್ಳಲು ಸಂಶೋಧನೆ ಹಾಗೂ ಅದ್ಯಯನ ಅಗತ್ಯ ಇದ್ದು ಸಂಶೋಧನಾ ಕೇಂದ್ರವನ್ನು ಬೆಂಗಳೂರು ವಿ.ವಿ ಯಲ್ಲಿ ಸ್ಥಾಪನೆ ಮಾಡಬೇಕು.
- ಪಾರಂಪರಿಕವಾಗಿ ಹಂದಿ ಸಾಕಾಣಿಕೆ ಮಾಡುತ್ತಿರುವ ಅಲೆಮಾರಿ ಸಮುದಾಯಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿಯನ್ನು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸುಧಾರಿತ ಮಾಂಸದ ಮಳಿಗೆಗಳನ್ನು ಸ್ಥಾಪಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
- ಅಲೆಮಾರಿ ಸಮುದಾಯಗಳ ಶಿಕ್ಷಣಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಸಂಚಾರಿ ಶಾಲೆಗಳನ್ನು ಸ್ಥಾಪಿಸಲು ವಿಶೇಷ ಅನುದಾನ ನೀಡಬೇಕು.
- ಸನಾದಿ ಅಪ್ಪಣ್ಣನವರ ಸಮಾಧಿ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರ ಮಾಡಬೇಕು ಹಾಗೂ ಸಂಗೀತ ಅಕಾಡೆಮಿ ಸ್ಥಾಪಿಸಬೇಕು.
- 12 ನೇ ಶತಮಾನದ ಬಸವಣ್ಣನ ಸಮಕಾಲೀನ ಶರಣ ನುಲಿಯ ಚಂದಯ್ಯನ ಜಯಂತಿಯನ್ನು ರಜೆ ರಹಿತವಾಗಿ ಸರಕಾರವೇ ಆಚರಿಲು ಆದೇಶ ಮಾಡಿ ಜಯಂತಿ ಆಚರಿಸಲು ಅನುದಾನವನ್ನು ಘೋಷಣೆ ಮಾಡಬೇಕು.
- 2019-20 ಸಾಲಿಗೆ ಕೋಶದಿಂದ ಅರ್ಜಿ ಆಹ್ವಾನ ತುರ್ತಾಗಿ ಮಾಡಬೇಕು.
ಹೀಗೆ ಅಲೆಮಾರಿಗಳ ಸಮಸ್ಯೆಗಳ ಕುರಿತು ಬಹಳ ಸವಿಸ್ತಾರವಾಗಿ ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಆನಂದ್ ಕುಮಾರ್ ಏಕಲವ್ಯ ರವರು ಉಪಮುಖ್ಯ ಮಂತ್ರಿಗಳಿಗೆ ಬಜೆಟ್ ಪೂರಕವಾಗಿ ಅತ್ಯಂತ ನಿರ್ದಿಷ್ಟವಾಗಿ ಪ್ರಸ್ತಾಪವನ್ನು ಮಾಡಿದರು.
ಹಕ್ಕುಗಳ ಕುರಿತು ಕಿರಣ್ ಕುಮಾರ್ ಕೊತ್ತಗೆರೆ ಅವರು ನಿಗಮದ ಉಪಯೋಗ ಏನಿದೆ ಎಂದು ವರದಿ ಸಲ್ಲಿಸಿದರು. ಡಾ. ಬಾಲಗುರುಮೂರ್ತಿರವರಿಗೆ ಅಲೆಮಾರಿ ಕೋಶವನ್ನು ನಿಗಮ ಮಾಡಲು ಕೋರಿದರು. ಸಿಳ್ಳೇಕ್ಯಾತಾಸ್ ಮತ್ತು ಅದರ ಪರ್ಯಾಯ ಪದಗಳ ಕುರಿತು ಕುಲಶಾಸ್ತ್ರೀಯ ಸಮೀಕ್ಷೆ ಮಾಡಿಸಲು ಆಕ್ಷನ್ ಪ್ಲಾನ್ ಮಂಜೂರು ಮಾಡುವಂತೆ, ಅತಿ ಸೂಕ್ಷ್ಮ ಸಮುದಾಯವಾದ ಸಿಳ್ಳೇಕ್ಯಾತಾಸ್ ಸಮುದಾಯಕ್ಕೆ ಒನ್ ಟೈಮ್ ಸೆಟ್ಲ್ಮೆಂಟ್ ಕುರಿತು ಬಿ.ಹೆಚ್ .ಮಂಜುನಾಥ್ ಮಾತನಾಡಿದರು.ಚೆನ್ನದಾಸರ ಸಮುದಾಯದ ಕುರಿತು ಮಾತನಾಡಿದ ಬಿ.ಟಿ ದಾಸರು ನಡಾವಳಿ ಶೀಘ್ರವಾಗಿ ನೀಡುವಂತೆ ಕೋರಿದರು.
ಬಹಳ ಒತ್ತಡಗಳ ಮಧ್ಯೆಯೂ ಇದೇ ಮೊದಲ ಬಾರಿಗೆ ನಮ್ಮ ಅಲೆಮಾರಿ ಸಮುದಾಯಕ್ಕೆ ಸಮಯಾವಕಾಶವನ್ನು ಹೋರಾಟದ ಮುಖಾಂತರ ಪಡೆದುವಿಮಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಇದೇ ಮೊಟ್ಟ ಮೊದಲ ಬಾರಿಗೆ ಅಲೆಮಾರಿಗಳ ಧ್ವನಿ ಜೋರಾಗೇ ಇತ್ತು.
ಈ ಸಂದರ್ಭದಲ್ಲಿ ಡಾ. ಬಾಲಗುರುಮೂರ್ತಿ ರಾಜ್ಯಾಧ್ಯಕ್ಷರು, ಕಿರಣ್ ಕುಮಾರ್ ಕೊತ್ತಿಗೆರೆ ರಾಜ್ಯಪ್ರಧಾನ ಕಾರ್ಯದರ್ಶಿ, ಆನಂದ ಏಕಲವ್ಯ ರಾಜ್ಯಉಪಾಧ್ಯಕ್ಷರು,ಬಿಎಚ್ ಮಂಜುನಾಥ್ ರಾಜ್ಯ ಉಪಾಧ್ಯಕ್ಷರು,ಬಿ.ಟಿ.ದಾಸರ ರಾಜ್ಯ ಉಪಾಧ್ಯಕ್ಷರು,ಸಿರಿವಾಟಿ ನರಸಿಂಹುಲು ರಾಜ್ಯ ಉಪಾಧ್ಯಕ್ಷರು, ಶ್ರೀಕಂಠಯ್ಯ ರಾಮನಗರ ಜಿಲ್ಲಾಧ್ಯಕ್ಷರು, ಎಸ್.ಕೆ. ದಾಸರ. ರಾಜ್ಯ ಸಲಹಾ ಸಮಿತಿ ಸಲಹೆಗಾರರು, ಬಸವರಾಜ ದಾಸರ, ರಾಜ್ಯ ಸಂಘಟನಾ ಕಾರ್ಯದರ್ಶಿ, ವೆಂಕಟೇಶ್ ದಾಸರ ಬೆಂಗಳೂರು ಸಂಘಟನಾ ಕಾರ್ಯದರ್ಶಿ ,ಮಹಿಳಾ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸುಗುಣ ಅಶ್ವತ್ಥ್ ,ಯಮನೂರಪ್ಪ,ರಾಜ್ಯ ಉಪಾಧ್ಯಕ್ಷರು,ರಾಜ್ಯ ದೊಂಬರ ಸಂಘ, ರಾಯಚೂರು, ಮೇದ ಸಮುದಾಯದ ಮುಖಂಡರು ಉಪಸ್ಥಿತಿ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243