ರಾಜಕೀಯ

ಲೋಕಸಭಾ ಚುನಾವಣೆ : ಕಮಲ‌ ಪಾಳಯದಲ್ಲಿ‌ ಟಿಕೆಟ್ ಗಾಗಿ ಭಾರೀ ಪೈಪೋಟಿ..!

Published

on

ಸುದ್ದಿದಿನ, ಬಳ್ಳಾರಿ : ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಹಿನ್ನೆಲೆ, ಕಮಲ ಪಕ್ಷದ ಟಿಕೆಟ್ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿ‌ ಏರ್ಪಟ್ಟಿದೆ.

ಶಾಸಕ ಶ್ರೀರಾಮುಲು, ಮಾಜಿ ಸಂಸದರಾದ ಜೆ ಶಾಂತಾ, ಸಣ್ಣ ಫಕೀರಪ್ಪ, ಮಾಜಿ ಶಾಸಕ ಸುರೇಶಬಾಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವೇಂದ್ರಪ್ಪ, ಓಬಳೇಶ್ ಲೋಕ ಸಭೆಗೆ ಚುನಾಯಿಸುವ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಇತ್ತ ಕಾಂಗ್ರೆಸ್ ನಿಂದ ಹಾಲಿ ಸಂಸದ ಉಗ್ರಪ್ಪ ಗೆ ಟಿಕೆಟ್ ನೀಡುವ ಸಾಧ್ಯತೆಯಿದ್ದು,ಕಾಂಗ್ರೆಸ್ ಒಳಗಿನ ಭಿನ್ನಭಿಪ್ರಾಯ ಉಗ್ರಪ್ಪ ಗೆ ಬಿಸಿ ತುಪ್ಪವಾಗುವುದೋ ಕಾದು ನೋಡಬೇಕಿದೆ.

ಸಚಿವ ಡಿ ಕೆ ಶಿವಕುಮಾರ್ ಬಲದಿಂದ ಮಾತ್ರ ಉಗ್ರಪ್ಪ ಗೆಲುವು ಸಾಧ್ಯತೆ‌ಯಿದ್ದು, ಹಲವು ಕಾರಣಗಳಿಗೆ ಉಗ್ರಪ್ಪ ಮೇಲೆ ಸ್ಥಳೀಯ ಮುಖಂಡರು ಮುನಿಸಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986815401

Trending

Exit mobile version