ರಾಜಕೀಯ
ಕರ್ನಾಟಕದಲ್ಲಿ 22 ಸ್ಥಾನ ಗೆದ್ದೇ ಗೆಲ್ತೇವೆ : ಯಡಿಯೂರಪ್ಪ
ಸುದ್ದಿದಿನ, ಚಿಕ್ಕಮಗಳೂರು : ಕರ್ನಾಟಕದಲ್ಲಿ ನಾವು 22 ಸ್ಥಾನ ಗೆದ್ದೆ ಗೆಲ್ಲುತ್ತೇವೆ.ಮಾಧ್ಯಮದವರ ಮೇಲೆ ದಾಳಿಯಾದ್ರೆ ನಾನು ಜವಾಬ್ದಾರರಲ್ಲ ಎಂಬ ಸಿಎಂ ಹೇಳಿಕೆ ವಿಚಾರ ಮಾಧ್ಯಮದವರ ಮೇಲೆ ಸಿಎಂ ಇಷ್ಟು ಹಗುರವಾಗಿ ಮಾತಾನಾಡುವುದು ಸರಿಯಲ್ಲ.ಇದನ್ನ ನಾನು ಖಂಡಿಸುತ್ತೇನೆ.ಮಾಧ್ಯಮದವರ ಮೇಲಿನ ಹೇಳಿಕೆ ವಿಚಾರಕ್ಕೆ ಸಿ.ಎಂ ಕೂಡಲೇ ಕ್ಷಮೆ ಕೇಳಬೇಕು ಎಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
ನಂತರ ಮಾತನಾಡಿದ ಅವರು, 2014 ಕ್ಕೆ ಹೋಲಿಕೆ ಮಾಡಿದ್ರೆ ಮೋದಿ ಅಲೆ ಈಗ ಹೆಚ್ಚಾಗಿದೆ. ಈ ಭಾರಿ 15 ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ಸಿ ಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂದಿದ್ರು,
ಆದ್ರೆ ಒಂಭತ್ತು ತಿಂಗಳು ಕಳೆದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಕಿಡಿಕಾರಿದರು.
ಪ್ರಧಾನ ಮಂತ್ರಿಯವರನ್ನು ಸಿ ಎಂ ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ. ಹಾಗೆ ಮಾಧ್ಯಮದವರ ಮೇಲೆ ದಾಳಿ ಆದ್ರೆ ನಾನು ಜವಬ್ದಾರನಲ್ಲ ಎಂಬ ಸಿ ಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿ.ಎಸ್.ವೈ
ಅವರು, ಕಾರ್ಯಾಂಗ, ನ್ಯಾಯಾಂಗ ಶಾಸಕಾಂಗದಷ್ಟೇ ಪತ್ರಿಕಾರಂಗಕ್ಕೂ ಗೌರವ ಇದೆ.ಆದ್ರೆ ಅದಕ್ಕೆ ಯಾವುದೇ ಬೆಲೆ ನೀಡದೇ ಇರುವುದನ್ನು ನಾನು ಖಂಡಿಸುತ್ತೇನೆ. ಸಿ ಎಂ ಈ ಕೂಡಲೇ ಮಾಧ್ಯಮದವರನ್ನು ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪಾಕಿಸ್ತಾನ ಭಾರತ ಸಂಘರ್ಷ ವಿಚಾರ ಎರಡು ವರ್ಷದ ಹಿಂದೆ ತಿಳಿದಿತ್ತು ಎಂಬ ಸಿ ಎಂ ಹೇಳಿಕೆ ವಿಚಾರ, ನಿಜಕ್ಕೂ ನಿಮಗೆ ಗೊತ್ತಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು. ತಿಳಿಸದೇ ಇರುವುದು ರಾಷ್ಟ್ರ ದ್ರೋಹದ ಕೆಲಸ. ಐಟಿ ರೈಡ್ ವಿಚಾರ ಸಂಬಂಧ ಸಿ ಎಂ ಆಪ್ತರ ಮನೆಯಲ್ಲಿದ್ದ ಹಣವನ್ನು ಬೇರೆ ಕಡೆ ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ.ಐಟಿ ದಾಳಿಯ ವಿರುದ್ಧ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದು ದುರದೃಷ್ಟ ಕರ ಎಂದರು.
ರಾಜ್ಯದ ಅಭಿವೃದ್ದಿ ಐದು ವರ್ಷ ಹಿಂದೆ ಹೋದ ಆಗಿದೆ. ತಂದೆ ಮಕ್ಕಳ ಚಿಂತೆ ಅವರ ಮೊಮ್ಮಕ್ಕಳು ಹಾಗೂ ಮಕ್ಕಳನ್ನು ಗೆಲ್ಲಿಸುವುದಾಗಿದೆ. ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಇಲ್ಲ. ಮಂಡ್ಯದಲ್ಲಿ ಸುಮಲತ ಗೆಲುವು ನಿಶ್ಚಿತ ಎಂಬುದು ಗೊತ್ತಾಗಿದೆ. ಹಾಗಾಗಿ ಈ ರೀತಿ ಮಾಧ್ಯಮದವರ ಮೇಲೆ ಸಿ ಎಂ ಹರಿಹಾಯುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ. ಉಡುಪಿ_ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ.