ದಿನದ ಸುದ್ದಿ

ಔರಾದ್ | ಬೌದ್ಧ ಭೂಮಿ ‘ಸಾಕೇತ’ ಉಳಿಸಲು ರಾಷ್ಟ್ರಪತಿಗಳಿಗೆ ಮನವಿ

Published

on

ಸುದ್ದಿದಿನ,ಬೀದರ್ : ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಸೋಮವಾರ ಬುದ್ಧಿಸ್ಟ್ ಇಂಟರ್ನ್ಯಾಷನಲ್ ನೆಟ್‌ವರ್ಕ್ ಸಂಘಟನೆಯ ವತಿಯಿಂದ ಸಾಕೇತ್ (ಅಯೋಧ್ಯೆ) ಮುಕ್ತಿ ಆಂದೋಲನದ ನಿಮಿತ್ತ ತಾಲ್ಲೂಕಿನ ತಹಶೀಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬಹುಜನ ಮುಕ್ತಿ ಪಾರ್ಟಿಯ ರಾಜ್ಯಾಧ್ಯಕ್ಷರು, ಮಾಜಿ ಶಾಸಕರಾದ ಜುಲ್ಫೇಕರ್ ಹಾಸ್ಮಿ ಹಾಗೂ
ಭಾರತೀಯ ವಿಧ್ಯಾರ್ಥಿ ಮೋರ್ಚಾದ ರಾಜ್ಯಾಧ್ಯಕ್ಷರಾದ ನಂದಾದೀಪ ಬೋರಳೆ ಅವರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ರಾಹೂಲ ಖಂದಾರೆ, ಸೋಪಾನರಾವ ಡೋಂಗ್ರೆ, ಸೂರ್ಯಕಾಂತ ಕಾಳೆಕರ, ಅನಿಲ್ ಸೂರ್ಯವಂಶಿ, ಚಂದ್ರಮಣಿ ಶಿಂಧೆ,ಪ್ರಶಾಂತ ಕಾಳೆ,ಪ್ರಕಾಶ ಕಾಂಬ್ಳೇ,ದಿಲೀಪ್ ಸೋನೆ,ಸತೀಶ್ ವಗ್ಗೆ ಇನ್ನಿತರ ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version