ದಿನದ ಸುದ್ದಿ

ಕೇಂದ್ರ ಬಜೆಟ್ 2019 | ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ : ಬಜೆಟ್ ನ ಪ್ರಮುಖಾಂಶಗಳು

Published

on

ಸುದ್ದಿದಿನ,ನವದೆಹಲಿ : ಕಾರ್ಮಿಕರ ಪಿಂಚಣಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ನಮಂತ್ರಿ ಶ್ರಮ ಮಾನ್ ಧನ್ ಯೋಜನೆ ಜಾರಿಯಾಗಿದೆ.ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6 ಲಕ್ಷ ರೂಗಳನ್ನು ಕಾರ್ಮಿಕನ ಕುಟುಂಬಕ್ಕೆ ಕೊಡಲಾಗುವುದು. ಪೆನ್ಷನ್ ಯೋಜನೆಯಿಂದ 10 ಕೋಟಿ ಜನರಿಗೆ ಲಾಭಪೆನ್ಷನ್ ಯೋಜನೆ ಈ ವರ್ಷದಿಂದಲೇ ಜಾರಿಯಾಗಲಿದೆ.

ಕಾರ್ಮಿಕರ ಮಿತ ವೇತನ 21 ಸಾವಿರಕ್ಕೆ ಏರಿಕೆಯಾಗಿದ್ದು, ಗ್ರಾಚ್ಯುಟಿಯಲ್ಲಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಯಾಗಿದೆ. ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಮಾಡಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಿರುವುದರ ಮೂಲಕ ಕೇಂದ್ರ ಸರ್ಕಾರಿ ನೌಕಕರಿಗೆ ಬಂಪರ್​ ಗಿಫ್ಟ್​ ನೀಡಿದೆ ಕೇಂದ್ರ ಸರ್ಕಾರ.

2019ರ ಬಜೆಟ್ ನ ಪ್ರಮುಖಾಂಶಗಳು

  1. ಗ್ರಾಮ ಸಡಕ್​​ ಯೋಜನೆಗೆ 19 ಸಾವಿರ ಕೋಟಿ ಮೀಸಲು.
  2. ಮಾರ್ಚ್​ ವೇಳೆಗೆ ಎಲ್ಲಾ ಮನೆಗಳಿಗೆ ವಿದ್ಯು​ಚ್ಛಕ್ತಿ ಪೂರೈಕೆ.
  3. ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂ. ಅನುದಾನ.
  4. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ
    14 ಹೊಸ ಏಮ್ಸ್​ ಆಸ್ಪತ್ರೆಗಳ ನಿರ್ಮಾಣ.
  5. ಆಯುಷ್ಮಾನ್​​ ಯೋಜನೆಗೆ 3500 ಕೋಟಿ ಖರ್ಚು.
  6. ಹರಿಯಾಣದಲ್ಲಿ 22ನೇ ಏಮ್ಸ್​ ಆಸ್ಪತ್ರೆ ನಿರ್ಮಾಣವಾಗಲಿದೆ.
  7. ಪ್ರಧಾನ ಮಂತ್ರ ಕಿಸಾನ್​​ ಸಮ್ಮಾನ್​ ನಿಧಿ ಯೋಜನೆ ಆರಂಭ.
  8. 5 ವರ್ಷಗಳಲ್ಲಿ 14 ಏಮ್ಸ್​ ಆಸ್ಪತ್ರೆಗಳನ್ನು ನಿರ್ಮಾಣ.
  9. 12 ಕೋಟಿ ರೈತರಿಗೆ ಈ ಯೋಜನೆಯ ಲಾಭ
    ಪ್ರತಿ ರೈತರ ಖಾತೆಗೆ ನೇರವಾಗಿ 6 ಸಾವಿರ ಹಣ ಜಮೆ.
  10. 2018ರಿಂದ ಪೂರ್ವಾನ್ವಯವಾಗಲಿರುವ ಯೋಜನೆ.
  11. ಯೋಜನೆಗೆ 75 ಸಾವಿರ ಕೋಟಿ ಅನುದಾನ ಮೀಸಲು.
  12. ರಾಷ್ಟ್ರೀಯ ಕಾಮಧೇನು ಆಯೋಗದಡಿ ಗೋ ತಳಿಗಳ ರಕ್ಷಣೆ.
  13. ಪಶುಪಾಲನೆ, ಮೀನುಗಾರಿಕೆ ಯೋಜನೆಗೆ 750 ಕೋಟಿ ಮೀಸಲು.
  14. ರೈತರಿಗೆ 2ರಷ್ಟು ಬಡ್ಡಿ ವಿನಾಯಿತಿ.

ಇವಿಷ್ಟು ವಿತ್ತ ಸಚಿವ ಪಿಯೂಶ್ ಗೋಯಲ್ ಇಂದು (ಶುಕ್ರವಾರ) ಮಂಡಿಸಿದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ನ ಪ್ರಮುಖಾಂಶಗಳಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version