ದಿನದ ಸುದ್ದಿ

ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು : ಪತ್ರಿಕೋದ್ಯಮ ವಿಭಾಗದಿಂದ ‘ಚಿಗುರು’ ಪತ್ರಿಕೆ ಹಾಗೂ ಸಾಕ್ಷಚಿತ್ರ ಬಿಡುಗಡೆ

Published

on

ಸುದ್ದಿದಿನ, ದಾವಣಗೆರೆ : ಪತ್ರಿಕೆ ಹಾಳೆಯ ಗುಣಮಟ್ಟಕ್ಕಿಂತ ಪತ್ರಿಕೆಯ ಒಳಗಿರುವ ಸುದ್ದಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳಲಿದೆ.ಇಂದು ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚು ನಿಭಾಯಿಸಬೇಕಿದೆ ಎಂದು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆಯವರು ಅಭಿಪ್ರಾಯ ಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಮತ್ತು ಅಂತರಿಕ ಗುಣಮಟ್ಟ ಕೋಶದಿಂದ ಆಯೋಜಿಸಲಾಗಿದ್ದ “ಚಿಗುರು” ಪತ್ರಿಕೆ ಹಾಗೂ ಸಾಕ್ಷಚಿತ್ರ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಪತ್ರಿಕೋದ್ಯಮ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಬರೆದ ನಮ್ಮ ಭಾರತೀಯ ಸಂವಿಧಾನದ ಮಾರ್ಗದರ್ಶನದಲ್ಲಿ ಬರೆಯುವ ಕಲೆಯನ್ನು ಕರಗತಮಾಡಿಕೊಳ್ಳಬೇಕು.

ಇಂದು ಬರೆಯುವವರ ಸಂಖ್ಯೆ ಬಹಳ ಕಡಿಮೆಯಿದೆ.ಹೆಚ್ಚು ಓದಿದಾಗ ಮಾತ್ರ ಪ್ರಬುದ್ಧವಾಗಿ ಬರೆಯಲು ಸಾಧ್ಯ,ಹೊಸದಾಗಿ ಬರೆಯುವವರು ತಮ್ಮ ದೈನಂದಿನ ಬದುಕಿನ ಘಟನೆಗಳನ್ನು ವಸ್ತುವನ್ನಾಗಿಸಬೇಕು. ಬೇರೆಯವರ ಅನಾವಶ್ಯಕ ಭಯವನ್ನು ಬದಿಗೊತ್ತಿ ನಮ್ಮ ಅಂತರಿಕ ಸ್ಪಷ್ಟತೆಗಾಗಿ ಬರೆಯಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ.ಎಸ್.ಆರ್.ಅಂಜನಪ್ಪ .ಪತ್ರಿಕೋದ್ಯಮವು ಸಮಾಜದ ವೈದ್ಯನಂತೆ ಕಾರ್ಯವನ್ನು ನಿರ್ವಹಿಸಬೇಕಿದೆ.ಪ್ರಜಾಪ್ರಭುತ್ವದ ಕಾವಲುಗಾರನಾಗಿರುವ ಪತ್ರಿಕಾರಂಗ ನೊಂದವರ ನೋವನ್ನು ಹೇಳುವ ಸಾಧನವಾಗಬೇಕು.ಬದ್ಧತೆ ಹಾಗೂ ಆಳವಾದ ಜ್ಞಾನ ಇದ್ದರೆ ಮಾತ್ರ ಉತ್ತಮ ಬರಹಗಾರನಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದಿರುವ ಚಿಗುರು ಪತ್ರಿಕೆ ಮುಂದೆ ಬೆಳೆದು ಹೆಮ್ಮರವಾಗಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲ ಮೈಗೂಡಿಸಿಕೊಂಡು ಅತ್ಯುತ್ತಮ ಪತ್ರಕರ್ತರಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಂತರಿಕ ಗುಣಮಟ್ಟ ಕೋಶದ ಸಹ ಸಂಚಾಲಕರಾದ ನಟರಾಜ್.ಜಿ.ಆರ್.ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾದೇವಿ.ಟಿ.ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಗಿರಿಸ್ವಾಮಿ,ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ,ಸಾಂಸ್ಕೃತಿಕ ಸಂಚಾಲಕರಾದ ಡಾ.ಲತಾ. ಕು.ಲಕ್ಷ್ಮಿ ಆರ್ ಹಾಗೂ ಪ್ರಾಧ್ಯಾಪಕರಾದ ಲೋಲಕ್ಷಿ.ರಿಹಾನಬಾನು.ಡಾ.ಲತಾ ಸಿ.ಹಾಗೂ ಹುಚ್ಚಂಗಿ ಪ್ರಸಾದ್ ಉಪಸ್ಥಿತರಿದ್ದರು. ಮತ್ತು ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version