ರಾಜಕೀಯ
ಮಾಜಿ ಸಂಸದ ಉಗ್ರಪ್ಪಗೆ ಬೆದರಿಯೊಡ್ಡಿದ ದುಷ್ಕರ್ಮಿಯನ್ನು ಬಂಧಿಸಿ : ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್
ಸುದ್ದಿದಿನ,ಹಗರಿಬೊಮ್ಮನಹಳ್ಳಿ: ಬಳ್ಳಾರಿ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ವಿ ಎಸ್ ಉಗ್ರಪ್ಪನವರಿಗೆ ಹುಸಿಹಿಂದುತ್ವವಾದಿಗಳು ಮತ್ತು ಸಂಘ ಪರಿವಾರದವರ ವಿರುದ್ಧ ಮಾತನಾಡಬಾರದೆಂದು ಬೆದರಿಕೆಯೊಡ್ಡಿ ಪತ್ರ ಬರೆದ ದುಷ್ಕರ್ಮಿಯನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಕರ್ನಾಟಕದಲ್ಲಿ ಆರಂಭವಾಗಿದ್ದು ಈಗಾಗಲೇ ಕಲಬುರ್ಗಿ ಮತ್ತು ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಗಿದ್ದು ಮುಕ್ತವಾಗಿ ಅಭಿಪ್ರಾಯ ಮಂಡಿಸುವ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ ಎಂದರು
ಕಾಂಗ್ರೆಸ್ ಪಕ್ಷದ ವಕ್ತಾರರಾದ ಎಎನ್ ನಟರಾಜಗೌಡ, ಸೂರ್ಯಮುಕುಂದರಾಜ್ ದಾವಣಗೆರೆ ಡಿ ಬಸವರಾಜ್ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಾದ ಬೆಂಗಳೂರಿನ ಬಿಂದುಗೌಡ ಶಿವಮೊಗ್ಗದ ಸೌಗಂಧಿಕ ರಘುನಾಥ ಹಾಗೂ ಇಂದಿರಾ ಪ್ರಿಯದರ್ಶಿನಿ ಮುಖ್ಯಸ್ಥೆ ಭವ್ಯ ನರಸಿಂಹಮೂರ್ತಿ ಇವರನ್ನು ಕೂಡಾ ಅವಾಚ್ಯ ಪದ ಬಳಸಿ, ಬೆದರಿಕೆಯೊಡ್ಡಿ ಜೊತೆಗೆ ನಕಲಿ ಅಶ್ಲೀಲ ಚಿತ್ರ ಸೃಷ್ಟಿಸಿ ಮಾನಹಾನಿ ಮಾಡುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದಾರೆ. ಈಗಾಗಲೇ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದು ತಕ್ಷಣವೇ ಅವರನ್ನು ಬಂಧಿಸಿ ಕ್ರಮ ಕೈಗೊಂಡು ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ವಕ್ತಾರ ಪತ್ರೇಶ್ ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243