ಲೋಕಾರೂಢಿ

ಕೊರೋನ ತಂದ ನಷ್ಟ

Published

on

  • ದಿವ್ಯಶ್ರೀ. ವಿ, ಬೆಂಗಳೂರು

ರಾಜ್ಯದಲ್ಲಿ ಕೋರೋನ ಕಾರಣದಿಂದ ಆಗಿರುವ ಲಾಕ್ಡೌನ್ ಬಹಳಷ್ಟು ಅನಾನುಕೂಲವಾಗಿದೆ. ಮುಖ್ಯವಾಗಿ ದಿನಗೂಲಿ ನೌಕರರಿಗೆ, ಅಂಗವಿಕಲರಿಗೆ, ಬಡವರ್ಗದವರಿಗೆ ಮತ್ತು ಮಧ್ಯಮ ವರ್ಗದವರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ, ಬಹಳಷ್ಟು ತೊಂದರೆ ಉಂಟು ಮಾಡುತ್ತದೆ. ಇದಕ್ಕೆ ನಮ್ಮ ಸರ್ಕಾರ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಭೆ ಕರೆದು ಅವರ ಜೊತೆಗೆ ಕೂಲಂಕುಷವಾಗಿ ಚರ್ಚಿಸಿ ತಮ್ಮ ಜಿಲ್ಲೆಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಪರಿಹಾರ ನೀಡಬೇಕು.

ಇಂತಹ ಪರಿಸ್ಥಿತಿಯಲ್ಲಿ ಜನರು ಜೀವನೋಪಾಯಕ್ಕೆ ಕೆಲಸವಿಲ್ಲದೆ ಇರುವಂತಹ ಪರಿಸ್ಥಿತಿ ಎದುರಾಗಿರುವ ಕಾರಣ ರಾಜ್ಯ ಸರ್ಕಾರ ಇವರ ಕಷ್ಟಗಳನ್ನು ಅರಿಯಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಜನರಿಗೆ ಆಗುತ್ತಿರುವ ಕಷ್ಟಗಳನ್ನು ತಿಳಿದುಕೊಂಡು ಅದನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ನೀಡಬೇಕು.

ರೋಗಿಗಳಿಗೆ ಅವಶ್ಯಕವಿರುವ ಔಷಧಿಗಳನ್ನು ತಲುಪಿಸುವಂತೆ ಇತರ ವರ್ಗ ಜನರಿಗೆ ದಿನನಿತ್ಯ ಬಳಸುವ ದಿನಸಿ ಹಾಗೂ ತರಕಾರಿ ಹಾಗೂ ಅಗತ್ಯವಿರುವ ಬಳಕೆ ಒದಗಿಸುವಂತೆ ಮಾಡಬೇಕು. ಮತ್ತು ಜಿಲ್ಲಾಧಿಕಾರಿಗಳು ಹದಿನೈದು ದಿನಕ್ಕೆ ಒಮ್ಮೆ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮಾಹಿತಿಯನ್ನು ಕೊಡಬೇಕು. ಜನರು ಸಹ ಲಾಕ್ ಡೌನ್ ನ ಕಾರಣವನ್ನು ಅರಿತುಕೊಂಡು ಅನವಶ್ಯಕವಾಗಿ ಸುತ್ತುವುದು ನಿಲ್ಲಿಸಿ. ಅಗತ್ಯವಿದ್ದರೆ ಮಾತ್ರ ಹೊರಗಡೆ ಬರಬೇಕು ಅದು ಕಡ್ಡಾಯವಾಗಿ ಮಾಸ್ಕನ್ನು ಧರಿಸಿ.

ಕೃಷಿ ಚಟುವಟಿಕೆ ಇರುವವರು ಮತ್ತು ತರಕಾರಿ ಹಣ್ಣು ಮಾರುವವರು ಸರ್ಕಾರದ ನಿಯಮವನ್ನು ಪಾಲಿಸುತ್ತಾ ನಿಗದಿತ ಸಮಯದಲ್ಲಿ ತಮ್ಮ ಕೆಲಸವನ್ನು ಮಾಡಬೇಕು. ಜನರು ಮಾಸ್ಕನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಬಿಸಾಡದೆ ಸರ್ಕಾರದ ಆದೇಶವನ್ನು ಪಾಲಿಸಬೇಕು. ಸಣ್ಣಪುಟ್ಟ ವ್ಯಾಪಾರವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಜನರಿಗೆ ಅವರ ಜಿಲ್ಲೆಯ ಅಧಿಕಾರಿಗಳು ಪರಿಹಾರವನ್ನು ಒದಗಿಸಿ ತಮ್ಮ ವ್ಯಾಪಾರವನ್ನು ಮಾಡುವಂತೆ ಅನುಮತಿಯನ್ನು ಕೊಡಬೇಕು.

ನಮ್ಮ ರಾಜ್ಯ ಸರ್ಕಾರ ಗರ್ಭಿಣಿ ಸ್ತ್ರೀಯರಿಗೆ ಬಹುಮುಖ್ಯವಾಗಿ ಎಲ್ಲಾತರದ ಅವಶ್ಯಕವಿರುವ ಸೌಲಭ್ಯವನ್ನು ವಿತರಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರು ಅಪೌಷ್ಟಿಕ ಕಾರಣದಿಂದ ಬಳಲುತ್ತಿರುವ ಗರ್ಭಿಣಿಯರನ್ನು ಹೆಚ್ಚು ನಿಗಾವಹಿಸಿ ನೋಡಿಕೊಳ್ಳಬೇಕು. ಕೊರೋನ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಆಗುತ್ತಿರುವ ತೊಂದರೆಯನ್ನು ನಮ್ಮ ರಾಜ್ಯ ಸರ್ಕಾರ ಮುಂದೆ ನಿಂತು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version