ಬಹಿರಂಗ

ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ದಲಿತರ ಶೋಷಣೆ

Published

on

ರ್ನಾಟಕದ ಮಹೋನ್ನತವಾದ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಎಂದು ಎಲ್ಲರೂ ಹೇಳುತ್ತಾರೆ. ಅಲ್ಲಿ ಮುತ್ತು , ರತ್ನ , ವಜ್ರ , ವೈಡೂರ್ಯಗಳನ್ನು ಸೇರಲ್ಲಿ(ಬಳ್ಳ) ಅಳೆದು ಮಾರುತ್ತಿದ್ದರು. ಸ್ತ್ರೀಯರು ಉನ್ನತ ಹುದ್ದೆಯಲ್ಲಿದ್ದರು.ಕಲೆ ಉತ್ತುಂಗದಲ್ಲಿತ್ತು. ಅದು ಹಂಗಿತ್ತು, ಅಲ್ಲಿ ಹಿಂಗಿತ್ತು ಎಂದು ವಿದೇಶೀಯರು ವರ್ಣಿಸಿದ್ದಾರೆಂದು ಹೆಮ್ಮೆಯಿಂದ ವರ್ಣಿಸುತ್ತೇವೆ. ಆದರೆ,ಅಲ್ಲಿ ಸಾಮಾಜಿಕ ವ್ಯವಸ್ಥೆ ಉತ್ತಮವಾಗಿರಲಿಲ್ಲ ಎಂಬ ಸತ್ಯವನ್ನು ಅದೇ ವಿದೇಶಿ ಪ್ರವಾಸಿಗರು ಹೇಳಿದ್ದಾರೆ ಎಂಬುದನ್ನು ಮರೆ ಮಾಚುತ್ತೇವೆ!!?

ವಿಜಯನಗರ ಸಾಮ್ರಾಜ್ಯವು ವರ್ಣ ವ್ಯವಸ್ಥೆಯನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬಂದಿರುವುದನ್ನು ಕಾಣಬಹುದು. ಹೊಲೆ ಮಾದಿಗರು ಊರ ಹೊರಗೆ ಬಾಳಬೇಕಿತ್ತು. ಚಪ್ಪಲಿ ಒಲೆಯುವುದು, ಕೃಷಿ ಕಾರ್ಮಿಕರಾಗಿ ದುಡಿಯೋದು, ಸತ್ತ ಪ್ರಾಣಿಗಳನ್ನು ಸಾಗಿಸೋದು, ಸ್ಮಾಶಾನ ಕಾಯೋದು , ಹೆಣ ಊಳಲು/ದಹನ ಕ್ರಿಯೆಗೆ ಸಿದ್ದಮಾಡುವಂತ ಹೀನ ಕಾರ್ಯಗಳು ಇವರ ಕಸುಬಾಗಿತ್ತು.

ನಿಕೋಲೊಕಂಠಿ ಹೇಳುವಂತೆ, ಸಾಲ ನೀಡಿದ ಒಡೆಯನ ಜೀತಗಾರರಾಗಿ/ಗುಲಾಮರಾಗಿ ಜೀವನ ಪರಿಯಂತ ದುಡಿಯಬೇಕಿತ್ತು. ಇಲ್ಲಿ ಹೆಣ್ಣು ಗಂಡೆಂಬ ಬೇದವಿರಲಿಲ್ಲ. ಗಂಡಸರ ಎದುರಲ್ಲೇ ಮಹಿಳೆಯರು ಒಡೆಯರ ಕಾಮ ತೃಷೆಗೆ ಬಲಿಯಾಗುವುದು ಸಾಮಾನ್ಯವಾಗಿತ್ತು.

ಶೂದ್ರ ಮಹಿಳೆಯರನ್ನು ದೇವದಾಸಿಗಳನ್ನಾಗಿ ಮಾಡಿದರೆ, ಹೊಲೆ-ಮಾದಿಗರ ಮಹಿಳೆಯರನ್ನು ಎತೇಚ್ಚವಾಗಿ ವೇಶ್ಯಾ ವೃತ್ತಿಗೆ ತಳ್ಳಲಾಗುತ್ತಿತ್ತು. ವೇಶ್ಯಾವಾಟಿಕೆಯು ಅಧಿಕೃತವಾಗಿ ರಾಜರಿಂದ ಮಾನ್ಯತೆ ಪಡೆದಿತ್ತು. ಅದಕ್ಕಾಗಿ ಪ್ರತ್ತೇಕ (ಸೂಳೆ ಬಜಾರ) ವಠಾರವೇ ಇತ್ತು. ಶೂದ್ರ ದೇವದಾಸಿಯರಿಗೆ ಅರಸನೊಡನೆ ವೀಳ್ಯದೆಲೆ ಅಗಿಯುವ , ಆಸ್ಥಾನ/ ಸಾರ್ವಜನಿಕ ಸ್ಥಳಗಳಲ್ಲಿ ನಾಟ್ಯ ಮಾಡಲು ಅವಕಾಶವಿತ್ತು. ಆದರೆ ಹೊಲೆ- ಮಾದಿಗ ವೇಶ್ಯೆಯರಿಗೆ ಇದಾವ ಅವಕಾಶವೂ ಇರಲಿಲ್ಲ.

ಬಾರ್ಬೋಸಾ ತನ್ನ ಕೃತಿಯಲ್ಲಿ ಹೀಗೆ ಬರೆಯುತ್ತಾನೆ, ಗಂಡ ಸತ್ತ ಸ್ತ್ರೀಯರು ಸತಿಸಹಗಮನಕ್ಕೆ ಬಲಿಯಾದರೆ, ಕೆಲ ಶೂದ್ರ ಮಹಿಳೆಯರು ಕೇಶಮುಂಡನ ಮಾಡಿಕೊಂಡು ನಿರಾಡಂಬರವಾಗಿ ಬದುಕಬೇಕಿತ್ತು. ಆದರೆ ಹೊಲೆ-ಮಾದಿಗ ಸ್ತ್ರೀಯರು ರಂಡೆಯರಾದರೆ ತಕ್ಷಣವೆ ವೇಶ್ಯಾ ವೃತ್ತಿಗೆ ಅಥವಾ ಕೂಡಿಕೆ ಜೀವನ ನಡೆಸಬೇಕಿತ್ತು.

ಅಬ್ದುಲ್‌ ರಜಾಕ್ ಹೇಳುವ ಪ್ರಕಾರ, “ಹೊಲೆ- ಮಾದಿಗರು ಒಳ್ಳೆಯ ಊಟ ಸವಿಯುವಂತಿರಲಿಲ್ಲ. ಒಳ್ಳೆ ಬಟ್ಟೆಗಳನ್ನು , ಒಡವೆಗಳನ್ನು ಧರಿಸುವಂತಿರಲಿಲ್ಲ.”

ಗಿರೀಶ್ ಹೆಚ್.ಕ್ಯಾದಿಗಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version