ದಿನದ ಸುದ್ದಿ

ದಸರಾ ಆನೆ ದ್ರೋಣ ಸಾವು | ಅರಣ್ಯಾಧಿಕಾರಿಗಳ ವಿರುದ್ಧ ಮಾವುತರ ಆಕ್ರೋಶ

Published

on

ಸುದ್ದಿದಿನ, ಕೊಡಗು : ಏಪ್ರಿಲ್ 26 ಶುಕ್ರವಾರ ರಂದು ಮೈಸೂರು ದಸರಾ ಆನೆ ‘ದ್ರೋಣ’ ಹೃದಯಾಘಾತದಿಂದ ಮೃತಪಟ್ಟ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ದ್ರೋಣ ಸಾವನ್ನಪ್ಪಿದ ಘಟನೆ ನಡೆದಿತ್ತು. ನಂತರ ಏಪ್ರಿಲ್ 27 ಶನಿವಾರ ದ್ರೋಣ ನರಳಿ ನರಳಿ‌ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ಸಾರ್ವಜನಿಕರು ಇದು ಅರಣ್ಯಾಧಿಕಾರಿಗಳ ನಿರ್ಲಕ್ಷ ಎಂದು ದೂರಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ. ಏಕೆಂದರೆ ಹಲವು ದಿನಗಳಿಂದ ದ್ರೋಣ ಅನಾರೋಗ್ಯದಿಂದ ನರಳಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸದಿರುವುದು ಇವರ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

ಶಿಬಿರದಲ್ಲಿ ಮಾವುತರು, ಕಾವಾಡಿಗರು ಕೊನೆ ಕ್ಷಣದವರೆಗೂ ದ್ರೋಣನ ಪ್ರಾಣ ಉಳಿಸಲು ಪರದಾಡಿದ್ದಾರೆ. ದ್ರೋಣನ ಮೈ ಮೇಲೆ ನೀರು ಹಾಕಿ ಪ್ರಾಣ ಉಳಿಸಲು ಸತತ ಪ್ರಯತ್ನ ಮಾಡಿದ್ರು ಕೂಡ ಕೊನೆಗೂ ನೋವು ತಡೆಯಲಾರದೇ ಪ್ರಾಣ ಬಿಟ್ಟದೆ.

ಈ ಸಾಕಾನೆ ಶಿಬಿರದಲ್ಲಿನ ಮಾವುತರು, ಕಾವಾಡಿಗರು ದ್ರೋಣನ ಮೈ ಮೇಲೆ ನೀರು ಹಾಕಿ ಪ್ರಾಣ ಉಳಿಸಲು ಸತತ ಪ್ರಯತ್ನ ಮಾಡಿದ್ದಾರೆ‌. ಅವರು ಎಷ್ಟೇ ಪರದಾಡಿದರೂ ಕೂಡ ಕೊನೆಗೆ ದ್ರೋಣ ನೋವು ತಡೆಯಲಾರದೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ದ್ರೋಣ ಸಾವನ್ನಪ್ಪುತ್ತಿರುವ ಮನಕಲಕುವ ವಿಡಿಯೋ

ದ್ರೋಣನ ಅನಾರೋಗ್ಯ ಸ್ಥಿತಿಯಲ್ಲಿಯೂ ಅರಣ್ಯ ಅಧಿಕಾರಿಗಳು ಪಶುವೈದ್ಯರನ್ನು ಕರಸಿ ಚಿಕಿತ್ಸೆ ಕೊಡಿಸದಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version