ದಿನದ ಸುದ್ದಿ

ದಾವಣಗೆರೆ | ರೈತರನ್ನು ನಿರ್ಲಕ್ಷಿಸಿದ ಸರ್ಕಾರ : ಲಕ್ಷಗಟ್ಟಲೆ ಬೆಳೆ ನಷ್ಟ

Published

on

ದಾವಣಗೆರೆ ನಗರದ ಬಿ.ಕಲಪನಹಳ್ಳಿ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ
  • ವಿಶೇಷ ವರದಿ: ಪ್ರೀತಿ.ಟಿ.ಎಸ್, ದಾವಣಗೆರೆ

ಸುದ್ದಿದಿನ, ದಾವಣಗೆರೆ: ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಯಿಲ್ಲದೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರವೇನೋ ಬೆಳೆಹಾನಿ ಪರಿಹರ ನೀಡಿದೆ. ಫಸಲ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ರೈತರ ಖಾತೆಗೆ ಜಮಾವಣೆ ಆಗಿದೆ. ಆದರೆ ಅದರಲ್ಲಿ ಒಂದು ಬಿಡಿಗಾಸು ಕೂಡ ರೈತರ ಕೈಗೆ ತಲುಪಿಲ್ಲ.

ಮೆಕ್ಕೆಜೋಳ, ಕಬ್ಬು ಮತ್ತಿತ್ತರ ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸದಾಗಿ ಸಿಹಿಕುಂಬಳ ಬೆಳೆಯುವ ಪ್ರಯತ್ನ ಮಾಡಲು ಹೋಗಿ ನಗರದ ಬಿ.ಕಲಪನಹಳ್ಳಿ ಗ್ರಾಮದ ಬಸವನಗೌಡ ಎಂಬ ರೈತ ನಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಾವಧಿ ಬೆಳೆ, ಕೆಲಸ ಕಡಿಮೆ, ಹೆಚ್ಚು ಗೊಬ್ಬರ, ಕೀಟನಾಶಕ ಅಗತ್ಯ ಇಲ್ಲ, ಲಾಭ ಹೆಚ್ಚು ಎನ್ನುವ ಕೆಲವರ ಮಾತನ್ನು ನಂಬಿ ಹೊಲದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಮನುಷ್ಯನ ದೇಹಕ್ಕೆ ಅಗತ್ಯವಾದ ಪೊಟಾಷಿಯಂ ಅಂಶ ತುಂಬಿರುವ, ಹೆಚ್ಚಾಗಿ ಸಾಂಬಾರ್ ಮಾಡಲು ಬಳಸುವ ಕುಂಬಳಕ್ಕೆ ಸಾಮಾನ್ಯವಾಗಿ ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲು ಮಹಾರಾಷ್ಟ, ತಮಿಳುನಾಡು, ಬಾಂಬೆ ಭಾಗದಲ್ಲಿ ಜನ ಸಾಮನ್ಯರು ಇಷ್ಟಪಟ್ಟು ತಿನ್ನುತ್ತಾರೆ ಎನ್ನುವ ಕಾರಣಕ್ಕೆ ಅಲ್ಲಿಗೆ ಕುಂಬಳ ಪೂರೈಸುವ ಉದ್ದೇಶದಿಂದ ಕುಂಬಳ ಬೆಳೆ ಬೆಳೆಯಲಾಗಿದೆ.

ನಷ್ಟಕ್ಕೊಳಗಾಗಿರುವ ಕುಂಬಳಕಾಯಿ ಬೆಳೆ

ಆದರೆ ನಿರೀಕ್ಷಿತ ದರ ದೊರೆಯದೇ ಖರ್ಚು ಮಾಡಿದ ಹಣವೂ ಸಿಗುವ ಲಕ್ಷಣ ಕಾಣದೆ ಹೊಲದಿಂದ ಹೇಗಾದರೂ ಫಸಲು ಸಾಗಣೆ ಆದರೆ ಸಾಕು ಎನ್ನುವಂತಾಗಿದೆ. ಇದಕ್ಕೆ ಪೂರಕವಾಗಿ ಪರಿಹಾರ ಕೊಡಬೇಕಾದ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗದೆ ಇರುವುದು ಅಧಿಕಾರಿಗಳ ಬೇಜಾವ್ಬಾರಿಯಾಗಿದೆ.

99 ಸಾವಿರ ರೂ. ಖರ್ಚು

3 ಎಕರೆ 10 ಗುಂಟೆ ಎಕರೆಯಲ್ಲಿ ಸಿಹಿಕುಂಬಳ ಬೆಳೆದಿದ್ದು 90 ಸಾವಿರ ರೂಪಾಯಿ ವೆಚ್ಚವಾಗಿದೆ. ಬೀಜಕ್ಕೆ ಮಾಡುವ ವೆಚ್ಚವೇ ಇದರಲ್ಲಿ ಸಿಂಹಪಾಲು ಕಬಳಿಸುತ್ತದೆ. ಅರ್ಜುನ ತಳಿಯ 50 ಗ್ರಾಂ ಬೀಜಕ್ಕೆ 500 ರೂಪಾಯಿ ದರವಿದೆ. ಮೂರು ಎಕರೆ ಜಮೀನಿಗೆ 1000ಗ್ರಾಂ ಬಿತ್ತನೆ ಬೀಜ ಹಾಕಿದ್ದು, ಸುಮಾರು 10.000 ರೂಪಾಯಿ ಖರ್ಚಾಗಿದೆ.

ಹೊಲ ಹದ ಮಾಡುವುದು, ಗೊಬ್ಬರ, ಕೀಟನಾಶಕ, ನೀರು, ಆಳುಗಳ ಕೂಲಿ ಮತ್ತಿತರ ವೆಚ್ಚವೂ ಬರುವುದರಿಂದ ಕೆಜಿಗೆ ಕನಿಷ್ಠ 6 ರೂಪಾಯಿಯಾದರೂ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗಾ ಕೆ.ಜಿ ಗೆ 2 ರೂಪಾಯಿ ಸಿಕ್ಕರೆ ಸಾಕು ಹೂಡಿದ ಹಣವಾದರು ಸಿಗುತ್ತದೆ ಎಂಬುದು ರೈತರ ಅಳಲು.


ಸಿಹಿ ಕುಂಬಳ ಬೆಳೆದು ಕೆಜಿಗೆ 5 ರೂಪಾಯಿ ಲಾಭ ಗಳಿಸಿದ ಕೆಲ ರೈತರು ನೀಡಿದ ಸಲಹೆ ಮೇರೆಗೆ ಈ ಬೆಳೆ ಬೆಳೆಯಲು ಮುಂದಾಗಿದ್ದು, ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಯಿಲ್ಲದೇ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದಕ್ಕೆ ಪರಿಹಾರವಾಗಿ ತೋಟಗಾರಿಕೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ನೀಡಿ, ಅರ್ಜಿ ಸಲ್ಲಿಸಿದರು ಅಧಿಕಾರಿಗಳು ಸರ್ವೆ ನಡೆಸದೆ ನಿರ್ಲಕ್ಷ್ಯ ತಾಳುತ್ತಿದ್ದಾರೆ.

    | ಕೆ.ಜಿ.ರಾಜಶೇಕರಪ್ಪ, ರೈತ, ಬಿ.ಕಲಪನಹಳ್ಳಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version