ಅಂತರಂಗ

ನನ್ನ ಜೀವನದಲ್ಲಿ ಕಂಡ ಮರೆಯದ ವೈದ್ಯರು

Published

on

ಚಿಕ್ಕವನಿರುವಾಗ ಅಂದ್ರೆ ನಾನು ನಾಲ್ಕೋ-ಐದೋ ತರಗತಿನೆ ಇರಬೇಕು.ಮೊದಲೇ ತುಂಟಾಟದ ಹುಡುಗ,ಕೂತಲ್ಲಿಯೇ ಕೂರದೇ ಸದಾ ಆಟ,ಅವರಿವರ ಜೊತೆ ಜಗಳ ಅವರು ಹೊಡೆದಾಗ ಮರಳಿ ಹೊಡೆಯಲಿಕ್ಕಾಗದಾಗ ಬಾಯಿಗೆ ಬಂದಂತೆ ಬೈದು,ಕಲ್ಲನ್ನು ಅವರ ಮೇಲೆ ತೂರಿ ಪರಾರಿಯಾಗಿಬಿಡುವವ,ಹೀಗೆ ಆಟ ಆಡುತ್ತಿರುವಾಗ ಅದು ಮಳೆಗಾಲ ಅಂದ್ರೆ ನೆಲವೆಲ್ಲ ಕೆಸರು ಆಗಿಬಿಡುತ್ತಿತ್ತು.ಕೆಸರಲ್ಲಿಯೇ ನಮ್ಮಾಟ ನೋಡಿ ಹೇಗೆಂದರೆ, ಮೊದಲೇ ಮಳೆಬಂದು ನೆಲಕ್ಕಂಟಿದ ಕಾಲು ಕಿತ್ತದಹಾಗೆ ಇರುವುದು.ಅದರಲ್ಲಿ ಸ್ಕೂಡೈವರಾಗಲಿ,ಗಟ್ಟಿರುವ ಕಟ್ಟಿಗೆಯಾಗಲಿ,ರಾಡಾಗಲಿ ತೊಗಂಡು ನೆಲಕ್ಕೆ ಬಿಳದೇ ನೇರವಾಗಿ ನಿಲ್ಲುವ ಹಾಗೆ ಶಕ್ತಿ ಮೀರಿ ಕೈಯಿಂದ ನೆಲಕ್ಕೆ ಬೀಸಬೇಕಿತ್ತು,ಅದು ನೇರವಾಗಿ ನಿಲ್ಲದೆ ಬಿದ್ದರೆ ಸೋತಂತೆ.(ಇದು ಆಟ)

ಮಳೆನಿಂತ ಮೇಲೆ ಆಟ ಶುರು ನಾನು ಸ್ಕೂಡೈವರ ತೊಗಂಡು ನೆಲಕ್ಕೆ ಒಂದು ಹೆಜ್ಜೆ ಮುಂದಿಟ್ಟು ಬೀಸುತ್ತಾ ಆಡುತ್ತಿರಬೇಕಾದರೆ,ಅಚಾನಕವಾಗಿ ಅದು ನೆಲಕ್ಕೆ ತಾಗದೆ ಮೊಣಕಾಲಿನ ಸ್ವಲ್ಪನೆ ಕೆಳಗಿನ ಭಾಗಕ್ಕೆ ಚುಚ್ಚಿಯೆ ಬಿಡ್ತು,ದೋಸ್ತ್ ರಿಗೆ ಯಾರಿಗೂ ಹೇಳಬ್ಯಾಡ್ರಿಲೆ ಅದರಾಗ ನಮ್ಮಮ್ಮಾಗ ಹೇಳಬ್ಯಾಡ್ರಿ ಎಂದು ಬೇನೆವಿತ್ತು,ದಸ್ತಿ(ಕರ್ ಚಿಪ್) ಕಾಲಿಗೆ ಕಟ್ಕೊಂಡು ಮತ್ತೆ ಶುರುವಾಟ.ಎರಡು ದಿನದ ನಂತರ ಅಮ್ಮ ನೋಡಿ ಸ್ವಲ್ಪನೆ ಕುಂಟುತಿರಬೇಕಾದರೆ ಕಾಲಿಗ್ಯಾಕೋ ದಸ್ತಿ ಕಟ್ಕೊಂಡು ಕುಂಟಕತ್ತಿ ಏನಾಗಐತಿ ತೋರ್ಸು ಬಾ ಅಂದ್ರ ಏನಿಲ್ಲ ಬೇ ಎಂದು ಮನೆಬಿಟ್ಟು ಹೊರಗ ಸವಾರಿ ನಮ್ಮದು.

ಯಾರೋ ಹೇಳಿಬಿಟ್ಟಾರ ಅಮ್ಮಗ, ನನ್ನ ದಾರಿ ಕಾದು ನನ್ನಿಡಿದು ಅಮ್ಮ ಕಾಲು ನೋಡಿದ್ರೆ ತೂತು ಬಿದ್ದು,ಎರಡು ಸಣ್ಣ ನೀರಿನ ಗುಳ್ಳೆ ತರಹ ತೂತಲ್ಲಿ ಗುಳ್ಳೆಗಳು ಇದ್ದವು. (ಕಾಲಿನ‌ಮೇಲೆ ಗುರುತು ಈಗಲೂ ಇದೆ) ಬೈದು ನೀನು ಬಾಳ ಕುಚೇಷ್ಟೆ ಇದಿಯಾಲೇ ನೋಡು ಎಲ್ಲಾ ಮೀರಿದ ಮೇಲೆ ಅದು ನಾ ಕೇಳಿದಾಗ ಹೇಳಿದ್ರೆ ಹೆಂಗ ನಡಿ ಪುಗ್ಗಿ ಡಾಕ್ಟರ್ ಹತ್ರ ಹೋಗೋಣ ಒಂದು ಸೂಜಿಗಿ ಚಲೋ ಆತದಾ ಅಂದಳು ಅಮ್ಮ.ಸೂಜಿ‌ಬ್ಯಾಡಬೇ ಬ್ಯಾನಿ ಆಕ್ಕದ ಅಂದ್ರ ಏನಾಗಲ್ಲ,ಹಿಂಗೆ ಬಿಟ್ರ ಆಪರೇಷನ್ ಮಾಡಿ ಕಾಲು ಅಲ್ಲಿಗೆ ಕಡಿತಾರ ನೋಡ್ ನಿನ್ನಿಷ್ಟ(ಮನದಲ್ಲಿಯೆ ಭಯ ಕುಂಟ ನಾಯ್ಯಾಕ ಆಗಬೇಕು ಮಾರ್ರೆಯ ಸೂಜಿ ಚುಚ್ಚಿಕೊಳ್ಳೊಣ ಎಂದು ನಿರ್ಧಾರ) ಎಂದಾಗ ಸರಿ ಅಂತ ದವಾಖಾನೆಗೆ ಹೋದೆವು.

ನನ್ನ ಕರ್ಮಕಾಂಡವೆಲ್ಲ ಎಳೆಎಳೆಯಾಗಿ ವೈದ್ಯರ ಮುಂದೆ ಬಿಡಿಸಿದಳು ನೋಡಿ ಅಮ್ಮಾ,ಆಗ ಸರಿ ಯಾಕೋ ನೋಡ್ಕಂಡು ಆಡಬೇಕಪ್ಪಾ,ಕಾಲಿಗೇನಾದರ ಆದ್ರೆ ಯಾರು ಜವಬ್ದಾರರು,ಏನೂ ಆಗುವುದಿಲ್ಲ ಒಂದು ಸೂಜಿ ಹಾಕಿದ್ರ ಸರಿಹೋಗುತ್ತೆ ಅಂದ್ರೆ ಬ್ಯಾನಿ ಆಗತ್ತ ಸರ್ ಅಂದೆ.ಹೇ ಹೇ ಬ್ಯಾನಿ ಆಗಲ್ಲ ಚುಚ್ಚಿಸಿಕೊಂಡ ನೋಡಿ ಮಾತಾಡು ಅಂದ್ರು ನನ್ನ ಮೆಚ್ಚಿನ ವೈದ್ಯರು,ಬ್ಯಾನಿ ಒಂದಾಗಲಿ ನೋಡ್ರಿ ನಿಮಗ ರೊಕ್ಕ(ಹಣ) ಕೊಡದಿಲ್ಲವೆಂದೆ ಅಮ್ಮನೂ,ಡಾಕ್ಟ್ರು ನಕ್ಕರು.ನಿನ್ನ ಹೆಸರೇನಪ್ಪ ಎಂದು ಸೂಜಿ ಚುಚ್ಚುತ್ತಾ ಕೇಳಿದ್ರೂ ಮಾತಾಡದಿದ್ದಾಗ ಹೇಸರೇಳಪ್ಪ ಅಂದಾಗ ಬ್ಯಾನಿ ಆಗತಿದ್ರೂ ಶಿವರಾಜ ಎಂದೆ,ಎಷ್ಟನೇ ತರಗತಿ ಎಂಬ ಪ್ರಶ್ನೆಗೆ ನಾಲ್ಕೋ-ಐದೋ ಅಂತ ಹೇಳ್ದೆ, ಯಾವ ಶಾಲೆ ಎಂಬುವುದಕ್ಕೂ ಸರಕಾರಿ ಶಾಲೆ ಅಂತ ಹೇಳುತ್ತಲೇ ಇರಬೇಕಾದ್ರೆ ಮುಗಿತು ನೋಡುಪಾ ಇಷ್ಟೇ ಸೂಜಿ ಕೆಲ್ಸ ಬಿಡಬೇಡ ಉಜ್ಜು ಇಲ್ಲಾಂದ್ರ ಬಾಯತದ(ಬಾಹು) ನೋಡು ಎಂದ್ರೆ ಅಮ್ಮ ಅಚ್ಚಟ್ಟಾಕಿ ಹುಜ್ಜುತಿದ್ದಳು,ನಾನು ಸಾಕ್ ಬಿಡು ಮಾ ಎಂದು ನಾನೇ ನನ್ನ ಕೈಯಾರೆ ಉಜ್ಜುತ್ತಾ ಬ್ಯಾನಿ ಮಾಡಲ್ಲ‌ ಅಂದು ಬ್ಯಾನಿ ಮಾಡುತ್ರಿ ನಿಮಗ ರೊಕ್ಕ ಕೊಡಲ್ಲ ಏನ್ ಮಾಡತ್ತಿ‌ರಿ ನೀವು ಮಾಡ್ರೀ(ಮನಸಿನಾಗ ಈಗ ಅನ್ಸಕತ್ತಾದ ಮತ್ತೊಂದು ಸೂಜಿ ಅಂದಿದ್ರ),ನೋಡ-ನೋಡುತ್ತಾ ಅಮ್ಮ ದುಡ್ಡು ಕೊಟ್ಟೇ ಬಿಟ್ಟಳು.ಕೊನೆಗೆ ಬಿಳ್ಕೋಡುವಾಗ ಹೇಳಿದ ಔಷಧಿಗಳನ್ನ ಸರಿಯಾಗಿ ತೊಗೋ ಶಿವು ಇಲ್ಲಂದ್ರ ಮತ್ತೆ ಸೂಜಿಗೆ ಬರಬೇಕಾಗುತ್ತೆ ನೋಡು ಎಂದು ಮುಗುಳ್ನಗುತ್ತಾ ಮಮತೆಯ ಉತ್ತರ ಡಾಕ್ಟರ್ ರದು.ನಾನು ಮಾತ್ರ ಮುಗುಳ್ನಗುತ್ತಾ ಮನೆಗೆ ಬಂದೆ.ಮರೆಯಲಾರದ ಇದು ಮೊದಲನೇ ನನ್ನ ಜೀವದ ವೈದ್ಯರಿವರು.

ಇವರು ಇಂದು ಮಗನ ವಿದ್ಯಾಬ್ಯಾಸದ ಸಲುವಾಗಿ ಬೆಂಗಳೂರಿನಲ್ಲಿದ್ದಾರೆ.ಇವರ ಹೆಸರು ಕುಲಕರ್ಣಿ ಡಾಕ್ಟರ್ ಅಂತ ಯಾಕೋ ಏನೋ ಇವರಿಗೆ ಪುಗ್ಗಿ(ತೆಲುಗಿನಲ್ಲಿ ಭಜಿ ಎಂದರ್ಥ) ಡಾಕ್ಟ್ರು ಎನ್ನುತ್ತಾರೆ.ಈಗ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ.ನಮಗೆ ಸಣ್ಣದೂ ಕಣ್ಣಾಗಲಿ,ಕಾಲಾಗಲಿ,ಕೈಯಿಗೆ ಏನಾದ್ರೂ ಆದ್ರೆ ಇವರ ಹತ್ರನೆ ತೋರಿಸುವುದು.ಅದು ವಿಶೇಷವೆಂದರೆ ಅಮ್ಮನಿಗೆ ತೋರಿಸಿದ ಮೇಲೆಯೇ ಇವರಿಗೆ ತೋರಿಸುವುದು. ಯಾಕಂದ್ರೆ ಅಮ್ಮನೂ ನಮ್ಮನೆಯವರ ಪಾಲಿಗೆ ಡಾಕ್ಟ್ರೆ,ಅವಳಿಗೆ ಮೀರಿದ ಮೇಲೆನೆ ನಿಜವಾದ ವೈದ್ಯ ಇವರ ಕಡೆ ದಾಪುಗಾಲು ನಮ್ಮದು.ಈಗಲೂ ಇವರ ನಿವೃತ್ತ ವೈದ್ಯ ತಂದೆ ಕಣ್ಣು ಸರಿಯಾಗಿ ಕಾಣದಿದ್ದರೂ ಮನೇಲಿಯೇ ವೃತ್ತಿ ಮುಂದುವರೆಸಿದ್ದಾರೆ.

ಪಿಯುಸಿಯಲ್ಲೊಮ್ಮೆ,ಹಾಸ್ಟೇಲ್ ನಲ್ಲಿದ್ದಾಗ Hydrocele ಆಗಿತ್ತು,ಅದಕ್ಕೆ ಕಾರಣವೂ ತಿಳಿದಿರಲಿಲ್ಲ.ಮಾನ್ವಿಯ ಪ್ರಸ್ತುತ ಕಸಾಪ ಜಿಲ್ಲಾಧ್ಯಕ್ಷರೂ ಹೌದು,ಹಿರಿಯ ವೈದ್ಯರೂ ಹೌದು.ಅವರಿಗೆ ತೋರಿಸಿದರೆ ನೋಡಿ ಅವರು,ಅದನ್ನು ತೂಕಮಾಡಿ ಹುಷಾರು ಇರಬೇಕೋ ಏನಾದ್ರ ಆದ್ರ ಹೆಂಗ ಅಂದು ಔಷಧಿ ಕೊಡುವೆ ತೊಗಂಡು ಎರಡು ದಿನವಾದ ಮೇಲೆ ಬಾ ಎಂದರು.

ಎರಡು ದಿನ ಮುಗಿಸಿ ಹೋದ್ರೆ ಬಾಪಾ ಶಿವರಾಜ ಹೆಂಗೈತಿ ಅರಾಮಿದಿ ಎಂದು ಮುಗುಳ್ನಗುತ್ತಾ (ಹರೇ ಮಾರಾಯ ನನ್ನೆಸರು ನೆನಪು ಇಟ್ಟಾರಲ್ಲೋ ಅಂದು ಮನದಲ್ಲಿಯೇ ನಗು) ತೋರಿಸಿದೆ.ಮತ್ತೌಷಧಿ ಕೊಟ್ಟು ರಾಯಚೂರಿಗೆ ಹೋಗು ಆಫರೇಷನ್ ಮಾಡ್ತಾರೆ ಎಂದರು.ಇವರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಎರಡನೇ ವೈದ್ಯರು.

ರಾಯಚೂರಿನ ರೀಮ್ಸ್ ಆಸ್ಪತ್ರೆಯಲ್ಲಿ ಮಾಮನ ಸಹಾಯ,ಸಹಕಾರದೊಂದಿಗೆ ಮನೆಯವರಿಗೆ ಗೊತ್ತಾಗದೇ ಪರಿಚಯಸ್ಥ ನರ್ಸ್ ರಿಂದ ದಾಖಲಾಗಿ,ಆಫರೇಷನ್ ಇದ್ದ ಹಿಂದಿನ ದಿನ ಮನೆಗೆ ತಿಳಿಸಿದೆ.

ಅವರು ಇನ್ನೂ ವೈದ್ಯರಾಗುವವರು(MBBS) ತರಬೇತಿಯಲ್ಲಿದ್ದವರು ನೋಡಿ,ಆಫರೇಷನ್ ದಿನಾಂಕ ಕೊಟ್ಟು,ಸೈಡ್ ಗೆ(ತೊಡೆಯ ಎರಡೂ ಬದಿ ಸಂದಿಗೆ) ಸ್ಕೀನ್ ಪ್ರಾಬ್ಲಂ ಆಗಿತ್ತು ವಿಪರೀತ ತುರಿಕೆಯೂ ಇತ್ತು.ತುರಿಸಿ-ತುರಿಸಿ ಜಾಸ್ತಿನೆ ಆಗಿತ್ತು.ಅದಕ್ಕೂ ಔಷಧಿ ಕೊಟ್ಟರು ಅದು ಕಡಿಮೆಯಾಗಿರಲಿಲ್ಲ.

ಆಪರೇಷನ್ ದಿನವೂ ಬಂತು ದೊಡ್ಡ ಡಾಕ್ಟರ್ ಬಂದು ನೋಡಿ,ಏನದು ಸ್ಕೀನ್ ಗೆ ಎಂದು ಕೇಳಿ ಔಷಧಿ ಹೇಳಿದರೂ ಅದಕ್ಕೂ ಕಡಿಮೆಯಾಗಲಿಲ್ಲ.ಕೊನೆಗೂ ಆಫರೇಷನ್ ಹಾಲ್ ಗೆ ಕರೆದೊಯ್ದರು.ಮೊದಲೇ ತರಬೇತಿಯಲ್ಲಿರುವ ಹೆಣ್ಣುಮಕ್ಕಳು ಮೊಬ್ಬುಸೂದಿ ಹಾಕಲು ಬೆನ್ನಿಗೆ ಚುಚ್ಚುತ್ತಿದ್ದರು ಮೂರನೇ ಸಲ ಪರಿಪೂರ್ಣವಾಗಿ ಬೆದರುತ್ತಾ ಚುಚ್ಚಿಯೆ ಬಿಟ್ಟರು.ಸಣ್ಣ ಮಗು ಅತ್ತ ಹಾಗೆನೆ ಅತ್ತೆ,ದೊಡ್ಡ ಡಾಕ್ಟರ್ ಇಲ್ಲ‌-ಇಲ್‌ ಏನ್ ಆಗಲ್ಲವೆಂದರು.ಮತ್ತೊಬ್ಬ ಬಂದು ಕಾಲು ಎತ್ತು ಅಂದ ಸ್ವಲ್ಪ ಎತ್ತಿದೆ,ಮತ್ತೆ ಎತ್ತು ಎಂದ ಕಾಲು ಅಲುಗಾಡಿಸಲೂ ಸಹವಾಗಲಿಲ್ಲ.(ಮೊಬ್ಬುಸೂಜಿ ಹಾಕಿದ್ರಲ್ಲ ಅದ್ಕೇ).

ಆಫರೇಷನ್ ಶುರುವಾಯಿತು ಗಂಡು ಡಾಕ್ಟ್ರು ಮಾಡ್ತಾರೆಂದರೆ,ಹೆಣ್ಣು ಡಾಕ್ಟರ್ ಮಾಡಿ‌ಮುಗಿಸಿ ಹೊಲಿಗೆ ಹಾಕುತ್ತಾ ತರಬೇತುದಾರರಿಗೆ ವಿವರಿಸುತ್ತಿದ್ದರು ಅದು ನನಗೆ ಗೊತ್ತಾಗಲೇ ಇಲ್ಲ.ನನ್ನ ಬೆಡ್ಡಿಗೆ ಹಾಕಿ ಇಂಟ್ರೋಲ್ ಗೆ ಪೈಪ್ ಹಾಕಿ ಬಿಟ್ಟು ಹೋದ್ರು.ಸೂಸು ಬರದೇ ಗೊತ್ತಾಗುತ್ತಿರಲಿಲ್ಲ,ಚೀಲಗಟ್ಟಲೇ ತುಂಬುತ್ತಿತ್ತು.ಅದನ್ನು ಅಣ್ಣಾ ಎತ್ತಿ ಹಾಕುತ್ತಾ ನನ ಕರ್ಮ ನಿನದು ಎತ್ತಾಕಬೇಕಲ್ಲೋ ಅಂತ ಮೂಗು ಮುಚ್ಚಿ ಇನ್ನೊಮ್ಮೆ ಇಷ್ಟು ವಯ್ಯಿಬೇಡವೆಂದು ತೋರಿಸುತ್ತಿದ್ದ,ನನಗೆ ಗೊತ್ತೆ ಆಗುತ್ತಿರಲಿಲ್ಲ. ಇದು ನನ್ನ ಜೀವ ಉಳಿಸಿದ ಮೂರನೇ ವೈದ್ಯರು.

ಇಷ್ಟೆಲ್ಲವಾದ ಮೇಲೂ ಸ್ಕೀನ್ ಪ್ರಾಬ್ಲಃ ವರ್ಷವಾದರೂ ಹೋಗಿರಲಿಲ್ಲ.ಅದು ಯಾರೋ Supot lotion ಹಚ್ಚಿದ್ರೆ ಹೋಗುತ್ತೆ ಅಂದಾಗ ಅಮ್ಮ ತಂದು ದಿನಾಲೂ ಎರಡು ತಿಂಗಳಕಾಲ ನಿನ್ನಿಂದ ಬೇರೆ ಯಾರ್ಗೋ ಬಂದಾದ ಮತ್ತ ಎಂದು ಬೆಂಬಿಡದೇ ಹಚ್ಚಿ ಆ ಸಮಸ್ಯೆನ ದೂರ ಮಾಡಿದಳು.ಹಾಗಾಗಿ ತಾಯಿಯೇ ಮೊದಲಪಾಠ ಶಾಲೆವೆನ್ನುವ ಹಾಗೆ ಮೊದಲನೇ ವೈದ್ಯಳೂ ಹೌದು ನಮಗೆ.ಅಣ್ಣಾ ಅಂದಿದಿನಲ್ಲ ಅವನಿಗೂ ಈಗ ಸ್ಕೀನ್ ಪ್ರಾಬ್ಲಃ ಬಂದಿದೆ.ಸಪೋಟ್ ಲೋಷನ್ ಹಚ್ಚುತ್ತಾ ಅದನ್ನು ಕಳೆಯುತ್ತಿದ್ದೇನೆ.ಅವನು ಅಂದು ನಾ ಮಾಡಿದ ಆ ಕಾರ್ಯಕ್ಕೆ ಇಂದು ನಿನ್ನ ಉಪಕಾರವಿದು. ನಿನ್ನಿಂದಲೇ ಬಂದಿದ್ದು ಎಂದು ಭಯ್ಯುತ್ತಾ ನನ್ನ ಬಟ್ಟೆಗಳನ್ನು ಹಾಕಿಕೊಳ್ಳಬೇಡವೆನ್ನುತ್ತಾ ಧನ್ಯವಾದಗಳನ್ನು ಹೇಳುತ್ತಿದ್ದಾನೆ.

ಎಲ್ಲರಿಗೂ ವೈದ್ಯರ ದಿನದ ಶುಭಾಶಯಗಳು (ಜುಲೈ 1)

ಶಿವರಾಜ್ ಮೋತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version