ಲೈಫ್ ಸ್ಟೈಲ್
ಪ್ರಾಣಿಗಳ ಈ ‘ಆಶ್ರಯ ತಾಣ’ದ ಬಗ್ಗೆ ನಿಮಗೆಷ್ಟು ಗೊತ್ತು..!
ಇಷ್ಟು ವರ್ಷ ಮನೆಯ ಸದಸ್ಯನಾಗಿ ಬಾಳಿ ಬದುಕಿದ ನಿಮ್ಮ ಮುದ್ದು ನಾಯಿ,ಬೆಕ್ಕು, ಗಿಣಿ, ನಿಮ್ಮನ್ನು ಅಗಲಿದಾಗ, ಮನೆಯ ಭಾಗವೇ ಕತ್ತರಿಸಿಹೋದಂತಹ ಸಂಕಟ. ಪ್ರಾಣಿಪ್ರಿಯರ ಈ ದುಃಖ ಅರಿತ ಸಂಸ್ಥೆ ಯೊಂದು ಕೆಂಗೇರಿ ಬಳಿ ಸಾಕು ಪ್ರಾಣಿಗಳ ಅಂತ್ಯಕ್ರಿಯೆ ಗೆ ಜಾಗ ಮಾಡಿ ಕೊಟ್ಟಿದೆ. ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿಯಿಂದ ಹಿಂಭಾಗದಲ್ಲಿರುವ ‘ಪೀಪಲ್ಸ್ ಫಾರ್ ಅನಿಮಲ್ ಸಂಸ್ಥೆ’ಯು ಸಾವಿರಾರು ಪ್ರಾಣಿಗಳ ಆಶ್ರಯ ತಾಣವಾಗಿದ್ದು ವರ್ಷಗಳಿಂದಲೂ ಪ್ರಾಣಿ ಪ್ರೀತಿ ಮೆರೆದಿದೆ. ಪ್ರಾಣಿಗಳ ಶುಶ್ರೂಷೆಯೂ ಇಲ್ಲಿ ನಡೆದಿದ್ದು, ಕೋತಿ, ಹಾವು, ಗಿಣಿ, ಗರುಡ ಹೀಗೆ ನಗರ ಪ್ರದೇಶದ ಕಾಡುಗಳಲ್ಲಿ ತೊಂದರೆಗೊಳಗಾದ ಪ್ರಾಣಿಗಳ ಆರೈಕೆ ಕೇಂದ್ರವೂ ಆಗಿದೆ.
ಮನೆಯ ಸಾಕು ಪ್ರಾಣಿ ಅಗಲಿದಾಗ ಮನುಷ್ಯರಂತೆಯೇ ಅವುಗಳಿಗಾಗಿಯೇ ಪುಣ್ಯ ತಿಥಿ , ಕರ್ಮ-ಕಾರ್ಯಗಳನ್ನು ಮಾಡಲು ಅವಕಾಶವೂ ಕಲ್ಪಿಸಲಾಗಿದೆ. ಹುಟ್ಟು ಹಬ್ಬ, ಪುಣ್ಯ ತಿಥಿ ಸಂದಭ್ರದಲ್ಲಿ ಪ್ರಾಣಿಗಳ ನಡುವೆ ಅನ್ನದಾನ ಮಾಡಿ ಆಚರಿಕೊಳ್ಳುವ ಅವಕಾಶವೂ ಉಂಟು.
ಸುದ್ದಿದಿನ.ಕಾಂ|ವಾಟ್ಸಾಪ್|9986715401