ದಿನದ ಸುದ್ದಿ

ವಿಡಿಯೋ | ಸತತ ಮೂರು ತಿಂಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ : ಟ್ಯಾಕ್ಟರ್ ಲೈಟ್ ಬೆಳಕಲ್ಲಿ ನಿಶ್ಚಿತಾರ್ಥ

Published

on

  • ವರದಿ- ನಿಂಗಣ್ಣ.ಕೆ

ಸುದ್ದಿದಿನ,ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ನೆರೆ ರಾಜ್ಯ ಮಹಾರಾಷ್ಟ್ರ ದಲ್ಲಿ ಭಾರಿ ಪ್ರಮಾಣ ಮಳೆಯಾದುದರಿಂದ ಕೃಷ್ಣ ನದಿ ದಡದಲ್ಲಿ ಇರುವ ನೀಲಕಂಠರಾಯನ ಕಡ್ಡಿ ನಡುಗಡ್ಡೆಯಂತಾಗಿತ್ತು. ಪ್ರವಾಹದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಚಿಕ್ಕದಾದ ಸೇತುವೆ ಮೂಲಕ ಅಲ್ಲಿನ ಜನರನ್ನು ಗಂಜಿಕೇಂದ್ರಗಳಿಗೆ ತಂಗುವುದಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು. ಜೆಸ್ಕಾಂ ಅಧಿಕಾರಿಗಳು ಬೇಗ ವಿದ್ಯುತ್ ಕಂಬಗಳನ್ನು ಅಳವಡಿಸಿ ಬೆಳಕಿನ ಭಾಗ್ಯ ಕಲ್ಪಿಸಬೇಕಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಜೆಸ್ಕಾಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಅಲ್ಲಿನ ಜನರನ್ನು ಕತ್ತಲಿಯಿಂದ ಮುಕ್ತಿ ಗೊಳಿಸುವ ಗೋಜಿಗೆ ಹೋಗದಿರುವುದು ಜನರ ಮೇಲಿನ ನಿರ್ಲಕ್ಷತೆ ಎಂದು ಗೊತ್ತಾಗುತ್ತದೆ.

ಹಗಲು ಹೇಗೋ ಕಳೆಯುತ್ತಾರೆ,ರಾತ್ರಿಯಾದರೆ ಸಾಕು ನರಕಯಾತನೆ ಅನುಭವಿಸುವಂತಾಗಿದೆ.
ಅದೇ ಗ್ರಾಮದ ಅಮರಪ್ಪ ಹಾಗೂ ದುರಗಮ್ಮ ದಂಪತಿಯ ಮಗಳಾದ ಮಾದ್ಯಾಮಳ ನಿಶ್ಚಿತಾರ್ಥ ಕಾರ್ಯಕ್ರಮ ಟ್ರಾಕ್ಟರ್ ಲೈಟ್ ಬೆಳಕಿನಲ್ಲಿ ನಡದಿದೆ. ಮಾದ್ಯಾಮ ಹಾಗೂ ಸೋಪಣ್ಣ ಜೋಡಿಗಳ ನಿಶ್ಚಿತಾರ್ಥವದು. ಅಧಿಕಾರಿದ ಗದ್ದುಗೆ ಗುದ್ದಾಡುವ ಜನ ನಾಯಕರೇ ಇವರ ಕೊಗು ನಿಮಗೆ ಕೇಳಲಿಲ್ಲವೇ
ಗ್ರಾಮಸ್ಥರ ಇಡಿ ಶಾಪ ನಿಮ್ಮನ್ನ ತಟ್ಟದೇ ಬಿಡದು ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version