ಲೈಫ್ ಸ್ಟೈಲ್

‘ಮೆಂತೆ ಸೊಪ್ಪಿನ ಪಲ್ಯ’ ಮಾಡೋದು ಹೀಗೆ ನೋಡಿ..!

Published

on

ಆರೋಗ್ಯಕರ ಮೆಂತೆ ಸೊಪ್ಪಿನ ಪಲ್ಯ ಮಾಡುವ ಸುಲಭ ವಿಧಾನ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

  1. ಮೆಂತೆ ಸೊಪ್ಪು -1ಕಟ್
  2. ಈರುಳ್ಳಿ -1
  3. ಹಸಿಮೆಣಸಿನಕಾಯಿ -2
  4. ಹುಣಸೇ ರಸ -2ಚಮಚ
  5. ಉಪ್ಪು,ಬೆಲ್ಲ‌-ರುಚಿಗೆ
  6. ಒಗ್ಗರಣೆಗೆ-ಕೊಬ್ಬರಿ
  7. ಎಣ್ಣೆ,ಕಡಲೇಬೇಳೆ,ಉದ್ದಿನಬೇಳೆ,ಸಾಸಿವೆ,ಇಂಗು

ಮಾಡುವ ವಿಧಾನ-ಮೊದಲು ಮೆಂತೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,ಈರುಳ್ಳಿ, ಕಡಲೇ ಬೇಳೆ,ಉದ್ದಿನ‌ಬೇಳೆ,,ಹಸಿಮೆಣಸಿನಕಾಯಿ ,ಇಂಗು ಹಾಕಿ ಬಾಡಿಸಿ ,ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ‌,ಸೇರಿಸಿ ಸ್ವಲ್ಪ ನೀರು,ಹುಣಸೇ ರಸ ಸೇರಿಸಿ ಚೆನ್ನಾಗಿ ಬೇಯಿಸಿ ಚಪಾತಿ ಪುರಿ ಅಥವಾ ದೋಸೆಯೊಂದಿಗೆ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version