ಲೈಫ್ ಸ್ಟೈಲ್
‘ಮೆಂತ್ಯ’ ದ ಮಹಿಮೆ ಬಗ್ಗೆ ನೀವೂ ತಿಳಿಯಿರಿ..!
ನಾವು ಪ್ರತಿ ದಿನ ಮೆಂತ್ಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತೇವೆ ,ಏಕೆಂದರೆ ಅದರಿಂದ ನಮ್ಮ ದೇಹಕ್ಕೆ ತುಂಬಾನೆ ಉಪಯೋಗಗಳಿದೆ. ಮೆಂತ್ಯವನ್ನು ಸೊಪ್ಪಿನ ರೂಪದಲ್ಲಿ ಅಥವಾ ಮೆಂತ್ಯ ಕಾಳಿನ ರೂಪದಲ್ಲಿ ಬಳಸುತ್ತೇವೆ. ಇದು ನಮ್ಮ ದೇಹಕ್ಕೆ ತಂಪು ಕೊಡುತ್ತದೆ. ಇನ್ನೂ ಕೆಲವು ಉಪಯೋಗಗಳು ಮುಂದಿದೆ.
- ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಮತ್ತು ರಕ್ತಭೇದಿ ಕಡಿಮೆಯಾಗುತ್ತದೆ.
- ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
- ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಕ್ಷದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
- ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಈ ಅವಧಿಯಲ್ಲಿ ಪ್ರತಿದಿನ ಬಿಸಿನೀರನ ಬದಲು ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಬೇಕು.
- ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸಲು ಇದು ಸುಲಭ ಮಾರ್ಗ.
- ಮೆಂತ್ಯದ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ ಮೈಕೈನೋವು, ಬೆನ್ನು ನೋವು, ಸೊಂಟ ನೋವು ಗುಣವಾಗುತ್ತದೆ.
- ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಅಂಗೈ ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು ಅಂಗೈ ಉರಿ ಉಪಶಮನವಾಗುವುದು.
- ನೆನೆಸಿದ ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ಅರೆದು ಸ್ವಲ್ಪ ನಿಂಬೆ ರಸ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ತಲೆಯಲ್ಲಿ ಹೊಟ್ಟು ಏಳುವುದಿಲ್ಲ ಹಾಗೂ ಕೂದಲು ಬೆಳವಣಿಗೆಗೆ ಬಹು ಸಹಕಾರಿಯಾಗಿರುತ್ತದೆ.
- ಒಂದು ಕಪ್ಪು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ರಸ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ಶೀಘ್ರವೇ ನಿವಾರಣೆಯಾಗುತ್ತದೆ.
- ಮೆಂತ್ಯದ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿಂದರೆ ಸಂಧಿವಾತ ರೋಗಗಳ ನೋವು ಗುಣ ಕಾಣುವುದು.
- ಮೆಂತ್ಯದ ಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ, ಸಾಕಷ್ಟು ಉಪ್ಪು ಬೆರೆಸಿ ಮೆಣಸು ಮತ್ತು ಜೀರಿಗೆಯ ತುಪ್ಪದ ಒಗ್ಗರಣೆ ಹಾಕಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ.
- ಮೆಂತ್ಯದ ಸೊಪ್ಪನ್ನು ಹೆಚ್ಚಿ ಬೇಳೆಯೊಂದಿಗೆ ಬೇಯಿಸಿ ಹುಳಿ ಮಾಡಿಕೊಂಡು ಕ್ರಮವಾಗಿ ಸೇವಿಸುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಿಗಳು ದೂರವಾಗುವುದು.
- ಮೆಂತ್ಯದ ಪುಡಿಯನ್ನು ಮಿತವಾಗಿ ಬೆಳಿಗ್ಗೆ ಮಜ್ಜಿಗೆಯಲ್ಲಿ ಸೇವಿಸಿದರೆ ಮಧುಮೇಹ ರೋಗಕ್ಕೆ ಒಳ್ಳೆಯದು. ಅದು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401