ದಿನದ ಸುದ್ದಿ
ವನ್ಯಜೀವಿ ಅಭಯಾರಣ್ಯವಾಗುವತ್ತ ‘ಮಲೆ ಮಹದೇಶ್ವರ ಬೆಟ್ಟ’
ಸುದ್ದಿದಿನ,ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೇಳಿದ ಮಾಹಿತಿಯನ್ನು ಮಲೆಮಹದೇಶ್ವರ ವನ್ಯಜೀವಿ ವಿಭಾಗದಿಂದ ವರದಿಯನ್ನು ಕಳಿಸಲಾಗಿದೆ. 907 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ 15 ಹುಲಿಗಳನ್ನು ಮಲೆಮಹದೇಶ್ವರ ಬೆಟ್ಟ ಹೊಂದಿದೆ. ಅಂದುಕೊಂಡಂತೆ ಆದರೆ ಮುಂದೆ ಮಲೆಮಹದೇಶ್ವರ ಬೆಟ್ಟ ರಾಷ್ಟ್ರದ 15ನೇ ಹಾಗೂ ರಾಜ್ಯದ 6ನೇ ವನ್ಯಜೀವಿ ಅಭಯಾರಣ್ಯವಾಗಲಿದೆ.