ದಿನದ ಸುದ್ದಿ

ಸಾಹಿತಿ ಗಿರೀಶ್ ಕಾರ್ನಾಡ್ ಇನ್ನಿಲ್ಲ

Published

on

ನ್ನಡದ ಹೆಸರಾಂತ ನಾಟಕಕಾರ, ಚಲನಚಿತ್ರ ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ ನಿಧನ ಹೊಂದಿರುತ್ತಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರ ದೇಹವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತಂದು ಸಾರ್ವಜನಿಕರು ದರ್ಶನಮಾಡಿ ಗೌರವವನ್ನು ಸಮರ್ಪಿಸಲು ಅನುಕೂಲ ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಶ್ರೇಷ್ಠ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಸಾವು ಕನ್ನಡವಷ್ಟೇ ಅಲ್ಲದೆ ಭಾರತೀಯ ಹಾಗೂ ವಿಶ್ವ ರಂಗಭೂಮಿಗೂ ಸಾಹಿತ್ಯ ಮತ್ತು ಚಲನ ಚಿತ್ರರಂಗಕ್ಕೂ ಆದ ತುಂಬಲಾರದ ನಷ್ಟ.

ಗಿರೀಶ್ ಕಾರ್ನಾಡ್ ಇತ್ತೀಚಿನ ದಿನಗಳಲ್ಲಿ ತನ್ನನ್ನು ‘ಅರ್ಬನ್ ನಕ್ಸಲೈಟ್’ ಎಂದು ಘೋಷಿಸಿಕೊಳ್ಳುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ಧ ಹಾಗೂ ಚಿಂತಕರ ಹತ್ಯೆಯ ವಿರುದ್ಧ ತಮ್ಮ ತೀವ್ರವಾದ ಪ್ರತಿರೋಧ ದಾಖಲಿಸಿದ್ದರು.

ಗಿರಿಶ್ ಕಾರ್ನಾಡರೊಂದಿಗೆ ನಾನು ಸಾರ್ವಜನಿಕ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಭಾಗವಹಿಸಿ ಹಂಚಿಕೊಂಡ ಕ್ಷಣಗಳ ಹಸಿರು ನೆನಪಿಗೆ ಶರಣು.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version