ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಕೆಂಬೂತ

Published

on

ಫೋಟೋ : ಭಗವತಿ ಎಂ.ಆರ್
  • ಭಗವತಿ ಎಂ.ಆರ್

ವಿಲು ಕುಣೀತೂಂತ ಕೆಂಭೂತ ಪುಕ್ಕ ತರೆದುಕೊಂಡಿತಂತೆ” ಎಂಬ ಗಾದೆ ಪ್ರಚಲಿತದಲ್ಲಿದೆ. ನವಿಲು ಕುಣಿಯುವುದನ್ನು ನೋಡಿ, ಕೆಂಬೂತ ತಾನೂ ಇರುವ ಪುಕ್ಕ ಕಿತ್ತುಹಾಕಿ ನವಿಲುಗರಿ ಕಟ್ಟಿಕೊಂಡು ಇದ್ದ ಪುಕ್ಕವನ್ನೂ ಕಳೆದುಕೊಂಡ ಕತೆ ಕೇಳಿರಬೇಕು. ಇದ್ದವರು ಯಾರೋ ಎನೋ ಮಾಡುತ್ತಾರೆಂದು ಇಲ್ಲದವರು ಅವರಂತೆ ಆಡಬಾರದು ಎಂಬುದು ಈ ಗಾದೆಯ ನೀತಿ.

ಕೆಂಬೂತ ನೋಡಲು ತಟ್ಟನೆ ಕಾಗೆಯಂತೆ ಕಂಡರೂ ಕಾಗೆಯ ಜಾತಿಗೆ ಸೇರಿದ್ದಲ್ಲ. ಕಾಗೆಗಳಿಗೆ ಕೆಂಬೂತದಂತೆ ಬೆದರಿದ ಕೆಂಪು ಕಣ್ಣು, ತಾಮ್ರ ಬಣ್ಣದ ರೆಕ್ಕೆ, ಉದ್ದವಾದ ಪುಕ್ಕಗಳಿಲ್ಲ. ಕೋಗಿಲೆಯ ಜಾತಿಗೆ ಸೇರಿದ, ಆದರೆ ಕೋಗಿಲೆಗಿಂತಲು ದೊಡ್ದದಾದ ಪಕ್ಷಿ ಕೆಂಭೂತ. ಇವಕ್ಕೆ ಸಾಂಬಾರ್ ಕಾಗೆ, ರತ್ನಪಕ್ಷಿ, ಕೆಂಬದ್ದು ಎಂಬ ಚೆಂದದ ಹೆಸರುಗಳು ಇವೆ. ದಕ್ಷಿಣ (Southern Coucal) ಮತ್ತು ಉತ್ತರ ಭಾರತದಲ್ಲಿ (Greater Coucal) ಕಾಣುವ ಕೆಂಬೂತ ನೋಡಲು ಒಂದೇ ರೀತಿ ಕಾಣುತ್ತವೆ, ಆದರೆ, ದಕ್ಷಿಣ ಭಾರತದ ಕೆಂಬೂತ ಆಕಾರದಲ್ಲಿ ಚಿಕ್ಕವು. ಕೆಂಬೂತಗಳು ಕೋಗಿಲೆಯ ಜಾತಿಗೆ ಸೇರಿದರು, ಇವು ಕೋಗಿಲೆಗಳಂತೆ ಪರಾವಲಂಬಿಗಳಲ್ಲ-ಕೋಗಿಲೆಗಳಂತೆ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವುದಿಲ್ಲ.

ಕೆಂಬೂತಗಳು ಹೆಚ್ಚು ಒಂಟಿಯಾಗಿಯೆ ಕಾಣುತ್ತವೆ. ಇವು ತುಂಬಾ ಸಂಕೋಚ ಸ್ವಭಾವದವು. ಗಿಡ, ಮರಗಳೊಳಗೆ ಸೇರಿಕೊಂಡರೆ ಅವುಗಳನ್ನು ಗುರುತಿಸುವುದು ಕಷ್ಟ. ಅವು ಬರ್ರ್ ಎಂದು ಹಾರಿ ಹೋದಾಗಲೇ ಅವುಗಳು ಇರುವುದು ನಮಗೆ ಗೊತ್ತಾಗುತ್ತದೆ. ಕೆಂಬೂತಗಳು ಅಷ್ಟೇನು ಉಪದ್ರಕಾರಿಗಳ್ಳಲ್ಲವಾದರೂ, ಸಣ್ಣ ಪಕ್ಷಿಗಳ ಪಾಲಿಗೆ ಉಪದ್ರಕಾರಿಗಳೇ ಆಗಿವೆ. ಸಣ್ಣ ಪಕ್ಷಿಗಳ ಗೂಡುಗಳೇನಾದರು ಇವುಗಳ ಕಣ್ಣಿಗೆ ಬಿದ್ದರೆ, ಗೂಡನ್ನು ತರಿದು, ಮೊಟ್ಟೆಗಳನ್ನು ತಿಂದು ಹಾಕುತ್ತವೆ.

ಬೆಳಗಿನ ಜಾವ ಕೆಂಬೂತ ಕಣ್ಣಿಗೆ ಬಿದ್ದರೆ ಅದೃಷ್ಟ. ಕೂಗು ಕೇಳಿ ಬಂದರೆ ಶುಭ ಸೂಚನೆ ಎಂಬ ನಂಬಿಕೆಗಳು ಇವೆ. ಆದರೆ, ಪುಟ್ಟ ಹಕ್ಕಿಗಳಿಗೆ ಅದು ಶುಭ ಸೂಚನೆ ಆಗಿರಲಾರದು!

ಕೆಂಬೂತ’ ಹಕ್ಕಿ ಧ್ವನಿ ಕೇಳಲು ಕೆಳಗಿನ ಲಿಂಕ್ ಮೇಲೆ‌ ಕ್ಲಿಕ್ ಮಾಡಿ

https://youtu.be/GtsYF1OMeNs

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version