ದಿನದ ಸುದ್ದಿ
ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವ ಲೈಸೆನ್ಸ್‍ದಾರರು ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಸೂಚನೆ
ಸುದ್ದಿದಿನ,ಧಾರವಾಡ : ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019 ರ ಕಲಂ 3 ರನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಬಂದೂಕು ಪರವಾನಿಗೆಯಲ್ಲಿ ಲೇಸೆನ್ಸ್‍ದಾರರು ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ .
ಮೂರನೇ ಬಂದೂಕಿಗೆ ಪರವಾನಿಗೆಯನ್ನು ಪಡೆದ ಪರವಾನಿಗೆದಾರರಿದ್ದಲ್ಲಿ , ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಿ ಮೂರನೇ ಆಯುಧವನ್ನು ಸಂಬಂಧಪಟ್ಟ ಪೋಲಿಸ್ ಠಾಣೆಯಲ್ಲಿ ಜಮೆ ಮಾಡಲು ನಿರ್ದೇಶನ ನೀಡಲಾಗಿದೆ.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಲೈಸೆನ್ಸ್ ಪಡೆದಿರುವ ಲೈಸೆನ್ಸದಾರರು ಮೂರು ಆಯುಧಗಳನ್ನು ಹೊಂದಿದ್ದರೆ, ಅಂತಹವರು ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯನ್ವಯ ಎರಡಕ್ಕಿಂತ ಹೆಚ್ಚುವರಿಯಾಗಿ ಹೊಂದಿರುವ ಮೂರನೇ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದಿನಾಂಕ: 13-12-2020 ರೊಳಗಾಗಿ ಜಮೆ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243