ದಿನದ ಸುದ್ದಿ
ಐದು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಅಂಗವಿಕಲನಿಗೆ ದೊರೆತಿಲ್ಲ ವಾಹನ ಸೌಲಭ್ಯ
- ವರದಿ – ನಿಂಗಣ್ಣ. ಕೆ
ಸುದ್ದಿದಿನ,ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಬೀರನಕಲ್ ತಾಂಡ ನಿವಾಸಿ ಗುಂಡಪ್ಪ ತಂದೆ ಚಂದಪ್ಪ ರಾಠೋಡ. ಈತ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದು ತನ್ನ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾನೆ. ಗುಂಡಪ್ಪ ಅಂಗವಿಕಲನಾಗದದ್ದು, ಡೆಕ್ಕನ್ ಕಾಲೇಜು ಕಲ್ಬುರ್ಗಿ ಯಲ್ಲಿ ಬಿ.ಎಡ್ ಓದುತ್ತಿದ್ದಾನೆ.
ಈತನಿಗೆ ಕಾಲೇಜಿಗೆ ಹೋಗುವುದಕ್ಕೆ ತ್ರಿಚಕ್ರ ವಾಹನ ಇಲ್ಲದೆ ಬಸ್ ನಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ದೇಹದ ನ್ಯೊನೆತೆ 75%ಇದ್ದು 2014ರಿಂ 2018 ಅರ್ಜಿಗಳನ್ನು ಹಾಕುತ್ತಾ ಇದ್ದಾನೆ. ಈತ ವಾಹನಕ್ಕಾಗಿ ಅರ್ಜಿಹಾಕಿ ಸೋತುಹೋಗಿದ್ದೇನೆ ಎಂದು ಸ್ಥಳೀಯರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಶಾಸಕರ ಕಛೇರಿಯಿಂದ ವಿಕಲಚೇತನ ಕಛೇರಿಗೆ ಗೆ ಓಡಾಡಿದ್ದೇ ಆಯಿತು. ಆದರೆ ಒಂದೇ ಒಂದು ಅರ್ಜಿಗೆ ಮಾನ್ಯತೆ ಸಿಗಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈತನ ಸಹಾಯಕ್ಕೆ ಬಂದು ವಾಹನ ಸೌಲಭ್ಯ ಒದಗಿಸಬೇಕೆಂದು, ಸ್ಥಳೀಯರಾದ ಮಹ್ಮದ ಅಲಿ ಕಂಭಾರ ಎಸ್.ಡಿ.ಎಂ.ಸಿಅಧ್ಯಕ್ಷರು ಹಾಗೂ ಗ್ರಾ.ಪಂ.ಸದಸ್ಯರು ಊರಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243