ದಿನದ ಸುದ್ದಿ

ಚನ್ನಗಿರಿ | ಗದ್ದೆಯೊಂದರಲ್ಲಿ ಚಿಪ್ಪು ಹಂದಿ ಪತ್ತೆ ..!

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನ ಅರಿಶಿನ ಘಟ್ಟ ಗ್ರಾಮದ ಗದ್ದೆಯೊಂದರಲ್ಲಿ ಚಿಪ್ಪು ಹಂದಿಯೊಂದು ಪತ್ತೆಯಾಗಿದ್ದು, ಆ ಚಿಪ್ಪು ಹಂದಿಯನ್ನು ಕಾಡಿನೊಳಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾಗಿ ಉಪ ಅರಣ್ಯ ಅಧಿಕಾರಿ ಮಿರ್ಜಾ ಮುಷ್ತಾಕ್ ಅಹಮ್ಮದ್ ಅವರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಅರಿಶಿನ ಘಟ್ಟದ ರೈತರೊಬ್ಬರು ಗದ್ದೆಯ ಕೆಲಸಕ್ಕೆ ಹೋದಾಗ ಚಿಪ್ಪು ಹಂದಿ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಚನ್ನಗಿರಿ ವಲಯದ ಅರಣ್ಯ ಅಧಿಕಾರಿಗೆ ತಿಳಿಸಿ, ನಂತರ ಚಿಪ್ಪು ಹಂದಿಯನ್ನು ಅವರ ವಶಕ್ಕೆ ಕೊಟ್ಟಿದ್ದಾರೆ. ನಂತರ ಚಿಪ್ಪು ಹಂದಿಯನ್ನು ಕಾಡಿನೊಳಗೆ ಬಿಡಲಾಗಿದೆ.


ಈ ಚಿಪ್ಪು ಹಂದಿಯನ್ನು ‘ಇಂಡಿಯನ್ ಪೆಂಗೋಲಿನ್’ ಎಂದು ಕರೆಯುತ್ತಾರೆ. ಇದು ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿಯಾಗಿದ್ದು, ಹುಳು-ಹುಪ್ಪಟೆಯನ್ನು ತಿಂದು ಬದುಕುತ್ತದೆ. ರಾತ್ರಿ ವೇಳೆಯಲ್ಲಿ ಈ ಚಿಪ್ಪಿ ಹಂದಿ ಹೆಚ್ಚು ಓಡಾಟ ಮಾಡುತ್ತದೆ.

| ಮಿರ್ಜಾ ಮುಷ್ತಾಕ್ ಅಹಮ್ಮದ್, ಉಪ ಅರಣ್ಯ ಅಧಿಕಾರಿ, ಚನ್ನಗಿರಿ


ಚಿಪ್ಪು ಹಂದಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://en.m.wikipedia.org/wiki/Indian_pangolin

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version