ನೆಲದನಿ

ನಿತ್ಯೋತ್ಸವ ಸಂತನಿಗೆ

Published

on

“ನಿ-ಸಾರ್”

ನಿತ್ಯೋತ್ಸವದೊಂದಿಗೆ ನೀವು ನಾಡಿನ ಪ್ರೀತಿ
ಮನಸ್ಸುಗಳನ್ನ ಸ್ಪರ್ಷಿಸಿ ಕನ್ನಡ ಭಾಷೆಯ
ಸೊಗಡನ್ನು ಮನ-ಮನಗಳಲ್ಲಿ
ಅಚ್ಚೊತ್ತಿಕೊಳ್ಳುವಂತೆ ಪ್ರೇರಣೆ ನೀಡಿದ್ದೀರಿ.

ನೀವು ನಿಮ್ನ ಭಾಷೆ ಹೇಗೆ ಪ್ರೀತಿಸಿದರೋ ಆ
ಭಾಷೆ ನಿಮ್ಮನ್ನೂ ಅಷ್ಟೇ ಉತ್ತುಂಗಕ್ಕೇರಿಸಿತು. ಕನ್ನಡಾಂಬೆ ನಿಮ್ಮ ತಾಯಿಯಾಗಿ ಹೇಗೆ
ನೆಡೆಸಿದಳೋ ಹಾಗೇ ನೆಡೆ-ನುಡಿ-ಬರೆದು
ನೀವು ಸೂತ್ರ-ಪಾತ್ರಧಾರಿಯಾದಿರಿ.ನೀವು ನಿಮ್ನದೇ ವೇಶದಲ್ಲಿ ವೇಶಧಾರಿಯಾದಿರಿ. ನೀವು ತೊಟ್ಟಿದ್ದ ಕನ್ನಡ ವೇಶ ಕಳಚಲಿಲ್ಲ ಎಂದೂ, ನಿಮ್ಮಪಾತ್ರ ಎಂದೂ ಅಳಿಸಲಾಗದು.

ಆ ಪಾತ್ರದಲಿ,ಆ ವೇಷದಲಿ,ಆ ಉಸಿರಿನಲಿ
ಕನ್ನಡ ತಾಯಿಯ ಮಡಿಲಲ್ಲಿನೀ ಬೀಜವಾದೆ.
ತಾಯಿಯ ಜಡೆಯಲ್ಲಿ ಬಾಡದಾಮಲೆನಾಡಿನ
ಮಲ್ಲಿಗೆಯಾಗಿ ಕನ್ನಡದ ಬೆಳಕ ಹಂಚಿದಿರಿ.
ನಿಮಗೊಂದು “ಸಲಾಂ” ಹೇಳಲೇ!ಉಂ.ಹುಂ
ನಿಮ್ಮ ಆತ್ಮದ ಪ್ರೀತಿಯ ಮಾಾತೖಭಾಷೆಯಲಿ
“ನಿಮಗೆ ನಮಸ್ಕಾರ “ನಿತ್ಯೋತ್ಸವ ಸಂತನಿಗೆ.

ನಿಮ್ಮ ಪಾದಕ್ಕೊಂದು ನಿಮ್ಮ-ನಮ್ಮ
ಮಲೆನಾಡಿನ ಮುದಡದಾ ಮಲ್ಲಿಗೆ”

ಕೆ.ಸಿರಾಜ್ ಅಹಮ್ಮದ್
ಜಿಲ್ಲಾ ಕ.ಸಾ.ಪ.ಸಂಚಾಲಕರು
ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲೂಕು‌
ಸಂತೇಬೆನ್ನೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version