ದಿನದ ಸುದ್ದಿ
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿ ನೆನೆದು ಬೇಸರದಿಂದ ಪೊಲೀಸ್ ಪೇದೆ ಬರೆದ ಪತ್ರ..!
ಸುದ್ದಿದಿನ,ಕೊಡಗು : ಸಿದ್ದಾಪುರ ಬಳಿಯ ತೋಟವೊಂದರಲ್ಲಿ ಬಡ ಕುಟುಂಬದ ಹೆಣ್ಣು ಮಗಳನ್ನು ಬಂಗಾಳಿ ಕಾರ್ಮಿಕರು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಪೊಲೀಸರೊಬ್ಬರು ತಮ್ಮ ಮನದ ವೇದನೆಯನ್ನು ಬರೆದಿದ್ದಾರೆ.
ಪೊಲೀಸ್ ಪೇದೆ ಪತ್ರ
ಇದು ಬಹಳ ಆತಂಕಕಾರಿ ಹಾಗು ನೋವಿನ ವಿಚಾರ, ಆ ಹೆಣ್ಣು ಮಗಳು ಶಾಲೆಯಿಂದ ಮನೆಗೆ ತಲುಪುವ ಮದ್ಯೆ ಆ ನೀಚ ಕೈಗಳಲ್ಲಿ ಬಂಧಿಯಾದಳು. ಸಂಜೆ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಕಾದು ಕುಳಿತಿದ್ದ ತಂದೆ ತಾಯಿಗೆ ಇಂದು ಮಗಳ ಶವ ಕಂಡಾಗ ಆದ ದುಃಖ ಯೋಚಿಸುವುದು ಅಸಾಧ್ಯ. ನಮ್ಮ ಮನೆಯ ಹುಡುಗಿ ನಮ್ಮ ಹುಡುಗಿ ಬದುಕಿನ ಕನಸು ಹೊತ್ತು ಬದುಕಬೇಕಾದ ಜೀವ ನಶಿಸಿ ಹೋಯಿತು.
ಅಭಿಮಾನ ಇದೆ ಪೊಲೀಸ್ ಎನ್ನಲು, ಯಾವುದೇ ಮಾಹಿತಿಯಿಲ್ಲದೆ ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ ಅಪರಾಧಿಗಳನ್ನು ಪತ್ತೆ ಹಚ್ಚಲಾಗಿದೆ. ಇಲಾಖೆಯ ಕಡೆಯಿಂದ ಹುಡುಗಿಗೆ ನ್ಯಾಯ ಕೊಟ್ಟಂಗಾಯಿತು. ಹೆಮ್ಮೆಯಿದೆ ನಾನು ಪೊಲೀಸ್ ಎನ್ನಲು.
ಕೂಲಿ ಕೆಲಸಕ್ಕಾಗಿ ಬಂದ ವರ್ಗ ಈ ರೀತಿಯ ಹೇಯ ಕೃತ್ಯ ನಡೆಸುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ನಿಜಕ್ಕೂ ಆತಂಕಕಾರಿ, ಕೊಲೆ, ಅತ್ಯಾಚಾರ, ಕಳ್ಳತನ ಎಲ್ಲಾತರಹದ ಕೃತ್ಯದಲ್ಲೂ ಭಾಗಿಯಾಗಿದ್ದಾರೆ. ಇದಕ್ಕೊಂದು ಕ್ರಮ ಆಗಲೇ ಬೇಕು.
ಆ ಹೆಣ್ಣುಮಗಳ ಆತ್ಮಕ್ಕೆ ಶಾಂತಿ ಸಿಗಲೀ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೀ, ಕುಟುಂಬಕ್ಕೆ ದುಃಖ ಬರಿಸುವ ಶಕ್ತಿನೀಡಲಿ. ದೇವರೆ ನಮ್ಮ ಮಕ್ಕಳನ್ನು ದುಷ್ಟರ ಕೈಗಳಿಂದ ಕಾಪಾಡು.
ಸುದ್ದಿದಿನ.ಕಾಂ|ವಾಟ್ಸಾಪ್|9986715401