ದಿನದ ಸುದ್ದಿ
ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಮೇಲೆ ಹಲ್ಲೆ : ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು
ಸುದ್ದಿದಿನ,ಬೆಂಗಳೂರು: ದ್ವಿಚಕ್ರ ವಾಹನ ಸವಾರನಿಂದ ಕೆ ಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ. ಚಿಂತಾಮಣಿ ಡಿಪೋಗೆ ಸೇರಿದ ಬಸ್ ಇಂದು ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿತ್ತು. ಕೆ.ಆರ್.ಪುರ ಟ್ರಾಫಿಕ್ ನಲ್ಲಿ ಹೆಲ್ಮೆಟ್ ಧರಿಸದೇ ಅಡ್ಡಾ-ದಿಡ್ಡಿಯಾಗಿ ಬಂದ ದ್ವಿಚಕ್ರ ವಾಹನ ಸವಾರ ಚಿಂತಾಮಣಿ ಡಿಪೋಗೆ ಸೇರಿದ ಬಸ್ ಗೆ ಡಿಕ್ಕಿ ಹೊಡೆಯುವುದಲ್ಲದೇ ಬಸ್ ಗೆ ಕಲ್ಲು ತೂರಾಟ ಮಾಡಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಕಾರಣ ಚಾಲಕನ ಮುಖಕ್ಕೆ ಗಾಯಗಾಳಾಗಿವೆ. ಇದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಸೇರಿ ಬಸ್ ನ ಸಿಬ್ಬಂದಿ, ಹಲ್ಲೆ ನಡೆಸಿದವನ ಹಿಡಿದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.